ADVERTISEMENT

ಜಮಖಂಡಿಯಲ್ಲಿ ಪಂಚಮಸಾಲಿ ಸಮಾಜದ 3ನೇ ಪೀಠ?

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 19:29 IST
Last Updated 17 ಅಕ್ಟೋಬರ್ 2021, 19:29 IST

ಜಮಖಂಡಿ: ಪಂಚಮಸಾಲಿ ಸಮುದಾಯದ ಮೂರನೇ ಪೀಠಕ್ಕೆ ಜಮಖಂಡಿ ಸಮೀಪ ವಿಜಯಪುರ ರಸ್ತೆಯಲ್ಲಿ 10 ಗುಂಟೆ ಜಮೀನು ಖರೀದಿಸಲಾಗಿದೆ.

ನಗರದಲ್ಲಿ ಭಾನುವಾರ ಪಂಚಮಸಾಲಿ ಮಠಾಧೀಶರ ಒಕ್ಕೂಟದಿಂದ ಭಾನುವಾರ ಗೋಪ್ಯ ಸಭೆ ಮಾಡಿ, ದೀಪಾವಳಿಯ ಒಳಗೆ ರಾಜ್ಯದ ಮೂಲೆ ಮೂಲೆಗಳಿಂದ 500ಕ್ಕೂ ಹೆಚ್ಚು ಸ್ವಾಮೀಜಿಗಳನ್ನು ಸೇರಿಸಿ ಮೂರನೇ ಪೀಠಕ್ಕೆ ಕಟ್ಟಡದ ಭೂಮಿ ಪೂಜೆ ಮಾಡುವ ಯೋಜಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು, ರಾಜ್ಯದಲ್ಲಿ ಪಂಚಮಸಾಲಿ ಸಮಾಜದಿಂದ ಐದು ಪೀಠಗಳು ಆಗಬೇಕು ಎಂದುಹರಿಹರ ಪೀಠದ ಮೊದಲ ಜಗದ್ಗುರುಗಳು ಬರೆದಿಟ್ಟಿದ್ದಾರೆ. ಆದರೆ ಅವರು ಲಿಂಗೈಕ್ಯರಾಗಿದ್ದರಿಂದ ಅವರ ಆಶಯ ಈಡೇರಿರಲಿಲ್ಲ. ಈಗ ಐದು ಪೀಠಗಳನ್ನು ಮಾಡಿದರೆ ತಪ್ಪು ಆಗುವುದಿಲ್ಲ ಎಂದರು.

ADVERTISEMENT

’ಸದ್ಯ 3ನೇ ಪೀಠ ಆಗಬಹುದು. ಜನರ ಒತ್ತಡ ಬಂದರೆ ಪೀಠ ಸ್ಥಾಪಿಸಬೇಕಾಗುತ್ತದೆ. ನಾವು ಎಲ್ಲ ಪರಂಪರೆಯವರು ಸೇರಿ ಒಕ್ಕೂಟ ಸ್ಥಾಪಿಸಿದ್ದೇವೆ, ಈ ಬಗ್ಗೆ ಪಂಚ ಪೀಠಾಧಿಶರಿಗೆ ವಿಷಯ ಗೊತ್ತಿದ್ದರೂ ನಮಗೆ ಯಾವುದೇ ಒತ್ತಡವನ್ನು ಹಾಕಿಲ್ಲ. ನಾವು ಅವರೊಂದಿಗೂ ಇರುತ್ತೇವೆ‘ ಎಂದರು.

ಬೆಂಡವಾಡ ರೇವಣಸಿದ್ದೇಶ್ವರ ಮಠದ ಗುರುಸಿದ್ದ ಮಹಾಸ್ವಾಮಿಗಳು, ಜಕನೂರ-ಕುಂಚನೂರ ಕಮರಿಮಠದ ಸಿದ್ಧಲಿಂಗದೇವರು, ಆಲಗೂರ ಧರಿದೇವರ ಮಠದ ಲಕ್ಷ್ಮಣಮುತ್ಯಾ, ಮಲ್ಲಿಕಾರ್ಜುನ ದೇವರು, ಈರಣ್ಣ ಶಾಸ್ತ್ರೀಗಳು, ಗುರುಬಸವ ಸ್ವಾಮಿಗಳು, ಸಂಖದ ಪ್ರಶಾಂತ ಮಹಾಸ್ವಾಮಿಗಳು, ಸಿದ್ಧಾರೂಡ ಶರಣರು, ಯೋಗೇಶ್ವರಿ ಮಾತಾಜಿ, ಪ್ರಭುಲಿಂಗ ಶರಣರು, ವಿರತೀಶಾನಂದ ಶ್ರೀಗಳು, ಬಸವರಾಜ ಕಾನಗೊಂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.