ADVERTISEMENT

ವೇಮನ ಮಹಾನ್ ದಾರ್ಶನಿಕ; ಸಿದ್ದಲಿಂಗಪ್ಪ ಬೀಳಗಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 6:26 IST
Last Updated 20 ಜನವರಿ 2026, 6:26 IST
ಹುನಗುಂದ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಮಹಾಯೋಗಿ ವೇಮನರ ಜಯಂತಿ ಆಚರಿಸಲಾಯಿತು
ಹುನಗುಂದ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಮಹಾಯೋಗಿ ವೇಮನರ ಜಯಂತಿ ಆಚರಿಸಲಾಯಿತು   

ಹುನಗುಂದ : ಜನಭಾಷೆಯ ಮೂಲಕ ಮೌಲಿಕ ವಚನಗಳನ್ನು ರಚಿಸಿ ಸಮಾಜ ಪರಿವರ್ತನೆಗೆ ಕಾರಣರಾದ ಮಹಾನ್ ದಾರ್ಶನಿಕ ವೇಮನರ ತತ್ವಾದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತವಾದವುಗಳು ಎಂದು ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಹೇಳಿದ್ದಾರೆ.

ತಾಲ್ಲೂಕು ಆಡಳಿತದ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮಹಾಯೋಗಿ ವೇಮನರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ, ಜಾತಿ ಅಸಮಾನತೆ, ಸಮಾಜದ ಸ್ವಾಸ್ತ್ಯಕ್ಕೆ ಅಡ್ಡಿಯಾಗುತ್ತಿದ್ದು, ಅವುಗಳ ನಿರ್ಮೂಲನೆಯಿಂದ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯ . ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರಗು ತರುತ್ತಿದ್ದು ಸತ್ಸಂಗ, ಯೋಗದ ಮೂಲಕ ಮನಸ್ಸನ್ನು ಶುದ್ಧೀಕರಿಕೊಳ್ಳಬೇಕೆಂಬ ವೇಮನರ ಸಂದೇಶ ನಮಗೆಲ್ಲ ದಾರಿ ದೀಪವಾಗಬೇಕಿದೆ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮಾತನಾಡಿ, ವ್ಯಕ್ತಿ ಎಷ್ಟು ದಿನ ಬದುಕಿದ್ದ ಎನ್ನುವುದಕ್ಕಿಂತ ಹೇಗೆ ಬದುಕಿದ್ದ ಎನ್ನುವುದು ಮಹತ್ವದ್ದಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ವೇಮನ ಮತ್ತು ಅವರ ಚಿಂತನೆಗಳು ಸದಾ ಸ್ಮರಣೀಯ ಎಂದರು.

ರೆಡ್ಡಿ ಸಮಾಜದ ಅಧ್ಯಕ್ಷರಾದ ಸಿ.ಎಂ.ಕಾಮಾ, ಸಮಾಜದ ಮುಖಂಡರಾದ ರಾಮನಗೌಡ ಬೆಳ್ಳಿಹಾಳ, ಎಂ.ಬಿ.ದೇವರಡ್ಡಿ, ಹನಮಗೌಡ ಹನಮಗೌಡ್ರ, ತಿಮ್ಮಣ್ಣ ಭಾವಿಕಟ್ಟಿ, ವೆಂಕಣ್ಣ ದಾದ್ಮಿ, ಮಹೇಶ ಬೆಳ್ಳಿಹಾಳ, ಗ್ರೇಡ್-2 ತಹಶೀಲ್ದಾರ ಮಹೇಶ ಸಂದಿಗವಾಡ ಇದ್ದರು.

ಶ್ರೀಶೈಲ ಗುರುವಿನಮಠ ಸ್ವಾಗತಿಸಿದರು. ಪುರಸಭೆ ಮಾಜಿ ಸದಸ್ಯ ಮಹೇಶ ಬೆಳ್ಳಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಸ್ತೇದಾರ ಶ್ರವಣಕುಮಾರ ಮುಂಡೇವಾಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.