
ಗುಳೇದಗುಡ್ಡ : ಪಟ್ಟಣದ ಪೋಲಿಸ್ ಇಲಾಖೆ ವತಿಯಿಂದ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಮ್ಯಾರಥಾನ್ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಠಾಣಾ ಪೋಲಿಸ್ ಗ್ರೌಂಡ್ ದಿಂದ ಆರಂಭವಾದ ಓಟ ಬಾದಾಮಿ ರಸ್ತೆ, ಸುಮಡ್ಡಿ ಕ್ರಾಸ್ ವರೆಗೆ ಸುಮಾರು 2 ಕಿ.ಮಿ. ನಡೆಯಿತು.
ಬಾಗಲಕೋಟೆ ಜಿಲ್ಲಾ ಪೋಲಿಸ್ ಬ್ಯಾನರ್ ಅಡಿಯಲ್ಲಿ ಏಕತೆಗಾಗಿ ಓಟ ಶೀರ್ಷಿಕೆ ಅಡಿ ಈ ನಡಿಗೆ ಜರುಗಿತು. ಪಟ್ಟಣದ ಭಂಡಾರಿ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಸಮವಸ್ತ್ರದಲ್ಲಿ ಭಾಗವಹಿಸಿದ್ದರು. ಶಾಲಾ ಶಿಕ್ಷಕರು, ಪಟ್ಟಣದ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು, ಪತ್ರಕರ್ತರು ಈ ನಡಿಗೆಯಲ್ಲಿ ಭಾಗವಹಿಸಿದ್ದರು.
ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಆರಂಭದಲ್ಲಿ ಮಾತನಾಡಿ, ಯುವಕರು ಸೈಬರ್ ಕ್ರೈಂ ದಿಂದ ಜಾಗೃತರಾಗಿರಬೇಕು. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ಅಪರಾಧ ಮಾಡುವ ಅಪರಾಧಿಗಳು ನಿತ್ಯ ಮೊಬೈಲ್‌ನಲ್ಲಿ ವಿವಿಧ ಇಲಾಖೆ, ಹಣಕಾಸು ಸಂಸ್ಥೆಗಳ ಹೆಸರುಗಳನ್ನು ಬಳಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ಇದರಿಂದ ಜಾಗೃತ ರಾಗಿರಬೇಕೆಂದು ಹೇಳಿದರು.
ಪತ್ರಕರ್ತ ಸಿ.ಎಂ.ಜೋಶಿ ಮಾತನಾಡಿದರು. ಎನ್.ಸಿ.ಸಿ. ಅಧಿಕಾರಿ ಅನೀಲ ಉಣಚಗಿ, ಬಾಲಚಂದ್ರ ಪತ್ತಾರ, ಯಮನಪ್ಪ ಹಿರೇಗೌಡರ, ಅಪರಾಧ ವಿಭಾಗದ ಪಿಎಸ್‌ಐ ಜಗದೀಶ, ಆನಂದ ಮನ್ನಿಕಟ್ಟಿ, ಶರಣು, ಪೋಲಿಸ್ ಸಿಬ್ಬಂದಿ, ಶಿಕ್ಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.