ADVERTISEMENT

ಒಪ್ಪಂದ ಆಗಿದ್ದರೆ ಅಧಿಕಾರ ಬಿಟ್ಟುಕೊಡಲಿ: ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 20:12 IST
Last Updated 31 ಡಿಸೆಂಬರ್ 2025, 20:12 IST
<div class="paragraphs"><p>&nbsp;ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್</p></div>

 ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್

   

ಬಾಗಲಕೋಟೆ: ರಾಜ್ಯ ಸರ್ಕಾರ ರಚನೆ ಸಂದರ್ಭದಲ್ಲಿ ಒಪ್ಪಂದ ಆಗಿದ್ದರೆ ಆ ಪ್ರಕಾರ ಅಧಿಕಾರ ಬಿಟ್ಟುಕೊಡಬೇಕು ಎಂದು ಶ್ರೀಶೈಲ ಪೀಠದ ಚೆನ್ನ ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಏನು ಒಪ್ಪಂದ ಆಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಯಾರು ಒಪ್ಪಂದ ಮಾಡಿಕೊಂಡಿದ್ದಾರೆ ಅವರಿಗೆ ಮಾತ್ರ ಸತ್ಯ ಗೊತ್ತಿದೆ’ ಎಂದರು.

ADVERTISEMENT

ಒಪ್ಪಂದ ಆಗಿದ್ದರೆ ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗಬಹುದು. ಪಕ್ಷದ ಸಂಘಟನೆಯಲ್ಲಿ ಅವರ ಪಾತ್ರವೂ ಇದೆ ಎಂದು ಹೇಳಿದರು.

ಒಪ್ಪಂದಗಳು ಮುರಿದುಬಿದ್ದಿದ್ದಕ್ಕೆ, ಒಪ್ಪಂದದ ಪ್ರಕಾರ ನಡೆದುಕೊಳ್ಳಲಾರದ್ದಕ್ಕೆ ಸರ್ಕಾರಗಳೇ ಉರುಳಿ ಬಿದ್ದಿವೆ. ಹಾಗೆ ಆಗಬಾರದು ಎಂದರೆ ಒಪ್ಪಂದದ ಪ್ರಕಾರ ನಡೆದುಕೊಳ್ಳುವುದು ಒಳ್ಳೆಯದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.