ADVERTISEMENT

ಬಾಗಲಕೋಟೆ: ಪ್ರವೀಣ್‌ ತೊಗಾಡಿಯಾ ವಾಹನಕ್ಕೆ ಬೆಂಗಾವಲು ವಾಹನ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 16:13 IST
Last Updated 17 ಜೂನ್ 2025, 16:13 IST
ಪ್ರವೀಣ್‌ ತೊಗಾಡಿಯಾ
ಪ್ರವೀಣ್‌ ತೊಗಾಡಿಯಾ   

ಬಾಗಲಕೋಟೆ: ಅಂತರರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಪ್ರವೀಣ್‌ ತೊಗಾಡಿಯಾ ಪ್ರಯಾಣಿಸುತ್ತಿದ್ದ ವಾಹನಕ್ಕೆ ಮಂಗಳವಾರ ಹುಬ್ಬಳ್ಳಿ–ವಿಜಯಪುರ ರಸ್ತೆಯ ಜಿರಗ್ಯಾಳ ಬೈಪಾಸ್‌ ಬಳಿ ಬೆಂಗಾವಲಿನ ವಾಹನ ಡಿಕ್ಕಿ ಹೊಡೆದಿದೆ.

ಜಿಲ್ಲೆಯ ಮುಧೋಳದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಜಮಖಂಡಿಯಲ್ಲಿದ್ದ ಕಾರ್ಯಕ್ರಮಕ್ಕೆ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಪ್ರವೀಣ ತೊಗಾಡಿಯಾ ಸೇರಿ ಯಾರಿಗೂ ಗಾಯಗಳಾಗಿಲ್ಲ.

ತೊಗಾಡಿಯಾ ಅವರು ಸಂಚರಿಸುತ್ತಿದ್ದ ವಾಹನದ ವೇಗವನ್ನು ತಗ್ಗಿಸಿದಾಗ ಹಿಂದಿದ್ದ ಬೆಂಗಾವಲು ಬೊಲೆರೊ ವಾಹನ ಡಿಕ್ಕಿ ಹೊಡಿದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೊಲೆರೊದ ಎರಡು ಏರ್‌ ಬ್ಯಾಗ್‌ ಓಪನ್‌ ಆಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.