ADVERTISEMENT

ವೀಣಾ ಕಾಶಪ್ಪನವರಿಗೆ ಟಿಕೆಟ್‌ಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 6:57 IST
Last Updated 20 ಮಾರ್ಚ್ 2024, 6:57 IST
<div class="paragraphs"><p>ಪ್ರತಿಭಟನೆ</p></div>

ಪ್ರತಿಭಟನೆ

   

ಬಾಗಲಕೋಟೆ: ಜಿಲ್ಲಾ‌ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ‌ ಅವರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿ ಕಾಶಪ್ಪನವರ‌ ಅಭಿಮಾನಿಗಳು‌ ಬಾಗಲಕೋಟೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ಮಾಡಿದರು.

ಹೊರ ಜಿಲ್ಲೆಯವರಿಗೆ ಟಿಕೆಟ್ ನೀಡಬಾರದು. ಐದು ವರ್ಷಗಳ ಕಾಲ ಪಕ್ಣಕ್ಕಾಗಿ ಕೆಲಸ ಮಾಡಿದ ವೀಣಾ ಕಾಶಪ್ಪನವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಕಳೆದ‌ ಲೋಕಸಭಾ‌ ಚುನಾವಣೆಯಲ್ಲಿ ಸೋತ ನಂತರ‌ ಪಕ್ಷ‌ ಸಂಘಟನೆ‌ ಮಾಡಿದ್ದಾರೆ. ಅವರನ್ನು ಬಿಟ್ಟು ಬೇರೆಯವರಿಗೆ ನೀಡಬಾರದು‌ ಎಂದು ಒತ್ತಾಯಿಸಿದರು

ಕಾಂಗ್ರೆಸ್ ಕಚೇರಿಯೊಳಕ್ಕೆ ಹೋಗಲು‌ ಮುಂದಾದ ಬೆಂಬಲಿಗರನ್ನು ಪೊಲೀಸರು ತಡೆದಾಗ ಮಾತಿನ ಚಕಮಕಿ ನಡೆಯಿತು.

ಪಕ್ಷದ‌ ಕಚೇರಿಗೆ‌ ಪಕ್ಷದವರು ಹೋಗಲು ಯಾಕೆ ತಡೆಯುತ್ತಿದ್ದೀರಿ ಎಂದು ವಾಗ್ವಾದ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.