ಬಾಗಲಕೋಟೆ: ‘ಪರಿಶಿಷ್ಟ ಜಾತಿಗಳ ಒಳಮಿಸಲಾತಿ ಸಮೀಕ್ಷೆಗೆ ಬರುವ ಅಧಿಕಾರಿಗಳಿಗೆ ಸಮಗಾರ ಹರಳಯ್ಯ ಸಮುದಾಯದವರು ಕುಟುಂಬದ ಎಲ್ಲ ಸದಸ್ಯರ ಪೂರ್ಣ ಮಾಹಿತಿಯೊಂದಿಗೆ ಜಾತಿಯ ಕಾಲಂನಲ್ಲಿ ಜಾತಿಯ ಪ್ರಮಾಣ ಪತ್ರದಲ್ಲಿ ಇರುವಂತೆ ಮಾಹಿತಿ ನೀಡಬೇಕು’ ಎಂದು ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಒಳಮಿಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ವೈ.ಸಿ. ಕಾಂಬಳೆ ಹೇಳಿದರು.
ನವನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಒಳಮಿಸಲಾತಿ ಹೋರಾಟ ಸಮಿತಿಯ ಸಮಾಜದ ಮುಖಂಡರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ಮುಖಂಡ ಬಸವರಾಜ ಮಾನೆ ಮಾತನಾಡಿ, ‘ಸಮಗಾರ ಸಮುದಾಯದವರು ಅನುಕ್ರಮ ನಂಬರ್ 93 ರಲ್ಲಿ ಜಾತಿ ನಮೂದಿಸಬೇಕು’ ಎಂದು ತಿಳಿಸಿದರು.
ಪ್ರೊ. ಹೇಮಂತ್ ಭೂತನಾಳ ಮಾತನಾಡಿ, ‘ಸಮಗಾರರ ಉಪಪಂಗಡಗಳು ತಮ್ಮ, ತಮ್ಮ ಜಾತಿ ಪ್ರಮಾಣ ಪತ್ರದಲ್ಲಿರುವಂತೆ ಅನುಕ್ರಮ ನಂಬರ್ 22ರಲ್ಲಿ ಪ್ರತ್ಯೇಕವಾಗಿ 23 ಭಾಗಗಳನ್ನು ಮಾಡಲಾಗಿದೆ’ ಎಂದು ಹೇಳಿದರು.
ಸಾಹಿತಿ ಅಶೋಕ ಹೊನಕೇರಿ ಮಾತನಾಡಿ, ‘ಸಮುದಾಯದವರಲ್ಲಿ ಇರುವ ಗೊಂದಲಗಳನ್ನು ಬಗೆಹರಿಸಿಕೊಂಡು, ಸರಿಯಾದ ಮಾಹಿತಿಯನ್ನು ನೀಡಬೇಕು’ ಎಂದರು.
ತೇರದಾಳ ಪುರಸಭೆ ಸದಸ್ಯ ಸಚಿನ್ ಕೊಡತೆ, ಸಮಾಜದ ನೌಕರರು ಮುಖಂಡರು ಅನಕ್ಷರಸ್ಥ ಜನರಿಗೆ ಸರಿಯಾದ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.
ಮುಖಂಡ ವಸಂತ ಮನಗೂಳಿ ಮಾತನಾಡಿದರು. ಗೌತಮ ದೊಡವಾಡ, ರಾಜಶೇಖರ ಸಾಂಬ್ರಾಣಿ, ಈಶ್ವರ ಬಾಲಾಗಾವಿ, ಹನಮಂತ ಸೂರ್ಯವಂಶಿ, ಅನಿಲ ಕಾಂಬಳೆ, ಶಂಕರ ಚಂದಾವರಿ, ಸಂಗಪ್ಪ ಖಾನಪೇಠ, ಮಂಜುನಾಥ ಬಾಲಾಗಾವಿ, ಶಂಕರ ಮಿರ್ಜಿ, ಮಾರುತಿ ದೊಡಮನಿ, ಮಲ್ಲಿಕಾರ್ಜುನ ಚಿಟಗುಬ್ಬಿ, ರವಿ ಮಂಟೂರ, ಪ್ರಭಾಕರ ಸಣ್ಣಕ್ಕಿ, ನಾಗೇಶ ಚಂದಾವರಿ, ಪ್ರಭು ಕೊಡತೆ, ರಾಜು ಸಣ್ಣಕ್ಕಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.