ADVERTISEMENT

ಬಾದಾಮಿಯಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 14:03 IST
Last Updated 15 ಆಗಸ್ಟ್ 2024, 14:03 IST
ಬಾದಾಮಿಯಲ್ಲಿ ಗುರುವಾರ ಮುಂಜಾನೆ ಸುರಿದ ಮಳೆಯಿಂದ ಎಪಿಎಂಸಿ ಮೈದಾನ ಸಂಪೂರ್ಣವಾಗಿ ಕೆಸರಾಗಿ ವಿದ್ಯಾರ್ಥಿಗಳು ಪರದಾಡಿದರು
ಬಾದಾಮಿಯಲ್ಲಿ ಗುರುವಾರ ಮುಂಜಾನೆ ಸುರಿದ ಮಳೆಯಿಂದ ಎಪಿಎಂಸಿ ಮೈದಾನ ಸಂಪೂರ್ಣವಾಗಿ ಕೆಸರಾಗಿ ವಿದ್ಯಾರ್ಥಿಗಳು ಪರದಾಡಿದರು   

ಬಾದಾಮಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ರಭಸವಾಗಿ ಮಳೆ ಸುರಿಯಿತು.

ಬೆಳಿಗ್ಗೆ ಸುರಿದ ಜೋರಾದ ಮಳೆಯಿಂದಾಗಿ ಧ್ವಜಾರೋಹಣ ನೆರವೇರಿಸಲು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ತೊಂದರೆಯಾಯಿತು. ಎಪಿಎಂಸಿ ಆವರಣದಲ್ಲಿ ನಡೆದ ತಾಲ್ಲೂಕು ಆಡಳಿತ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮೈದಾನವೆಲ್ಲ ಕೆಸರುಮಯವಾಗಿತ್ತು.

ಮೆಕ್ಕೆಜೋಳ, ಹೈಬ್ರಿಡ್ ಜೋಳ, ಸಜ್ಜೆ, ಶೇಂಗಾ ಮತ್ತು ತೊಗರಿ ಬೆಳೆಗೆ ಅನುಕೂಲವಾಗಿದೆ. ಆದರೆ ಹೆಸರು ಬೆಳೆ ಬಂದಿದ್ದು ಕಾಯಿ ಬಿಡಿಸಲು ರೈತರಿಗೆ ಅನಾನುಕೂಲವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.