
ಗುಳೇದಗುಡ್ಡ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ಸುರಿದ ಮಳೆಯಿಂದ ಗುಳೇದಗುಡ್ಡ– ಪರ್ವತಿ ಹಳ್ಳ ತುಂಬಿ ಹರಿಯುತ್ತಿದ್ದು ಆಸಂಗಿ ಪಟ್ಟದಕಲ್ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಗುಳೇದಗುಡ್ಡಕ್ಕೆ ಬರುವ ಐದು ಹಳ್ಳಿಗಲಾದ ಆಸಂಗಿ, ಕಟಗಿನಹಳ್ಳಿ, ಕೊಟ್ನಳ್ಳಿ, ಲಾಯದಗುಂದಿ, ಸಬ್ಬಲಹುಣಸಿ ಮತ್ತು ನಾಗರಾಳ ಎಸ್.ಪಿ. ಗ್ರಾಮದ ಜನರಿಗೆ ಗುಳೇದಗುಡ್ಡ ಪಟ್ಟಣಕ್ಕೆ ಬರಲು ಅಡಚಣೆಯಾಗಿದೆ. ಗುರುವಾರ ಸಂತೆದಿನವಾದ್ದರಿಂದ ಎಲ್ಲರಿಗೂ ತೊಂದರೆಯಾಯಿತು.
ಮೂಕೇಶ್ವರಿ ಪೆಟ್ರೋಲ್ ಬಂಕ್ ಜಲಾವೃತ: ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಹಿಂದುಗಡೆ ಇರುವ ಮೂಕೇಶ್ವರಿ ಪೆಟ್ರೋಲ್ ಪಂಪ್ ಹಳ್ಳದ ನೀರಿನಿಂದ ಸಂಪೂರ್ಣ ಜಲಾವೃತವಾಯಿತು. ಇದರಿಂದ ವಾಹನ ಸವಾರರು ಪೆಟ್ರೋಲ್ ಇಲ್ಲದೇ ಬೇರೆ ಪಂಪ್ ಆಶ್ರಯಿಸಬೇಕಾಯಿತು.
ಹೊಂಡದಂತಾದ ಜಮೀನು: ಮಳೆ ನೀರಿನಿಂದ ತಾಲ್ಲೂಕಿನಾದ್ಯಂತ ಹೊಲಗಳು ನೀರಿನಿಂದ ಆವೃತ್ತವಾಗಿ ಹೊಂಡದಂತಾಗಿವೆ. ತೆಗ್ಗಿ, ಕೆಲವಡಿ, ಆಸಂಗಿ ಮುಂತಾದೆಡೆ ವಿಪರೀತ ಮಳೆಯಾಗಿ ನೀರು ನಿಂತ ದೃಶ್ಯ ಕಂಡು ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.