ADVERTISEMENT

ಆರ್‌ಟಿಇ: 408 ಸೀಟುಗಳು ಖಾಲಿ

ಬಸವರಾಜ ಹವಾಲ್ದಾರ
Published 8 ಜುಲೈ 2025, 3:20 IST
Last Updated 8 ಜುಲೈ 2025, 3:20 IST
<div class="paragraphs"><p>ಆರ್‌ಟಿಇ: </p></div>

ಆರ್‌ಟಿಇ:

   

ಬಾಗಲಕೋಟೆ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಅನುದಾನಿತ ಶಾಲೆಗಳಲ್ಲಿ ಬಡ ಮಕ್ಕಳಿಗಾಗಿ ಶೇ 25ರಷ್ಟು ಸೀಟು ಕಾಯ್ದಿರಿಸಲಾಗಿದೆ. ಆದರೆ, ಸೀಟುಗಳ ಸಂಖ್ಯೆ ಹಾಗೂ ಪ್ರವೇಶ ಪಡೆಯುವವರ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ.

ಜಿಲ್ಲೆಯಲ್ಲಿ ಈ ವರ್ಷ ಆರ್‌ಟಿಇ ಅಡಿ 776 ಸೀಟುಗಳು ಲಭ್ಯ ಇದ್ದು, ಎರಡನೇ ಸುತ್ತಿನ ನಂತರವೂ 368 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಖಾಸಗಿ, ಸಿಬಿಎಸ್‌ಸಿ ಶಾಲೆಗಳನ್ನು ಕೈಬಿಟ್ಟ ನಂತರ ಪ್ರವೇಶ ಪಡೆಯುವವರ ಸಂಖ್ಯೆ ಯಲ್ಲಿ ಕುಸಿತವಾಗಿದೆ.

ADVERTISEMENT

ಮೊದಲ ಸುತ್ತಿನಲ್ಲಿ 442 ಸೀಟುಗಳ ಪ್ರವೇಶಕ್ಕೆ ಮಕ್ಕಳ ಆಯ್ಕೆ ಮಾಡಲಾಗಿತ್ತು. ಅದರಲ್ಲಿ 291 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಎರಡನೇ ಸುತ್ತಿನಲ್ಲಿ 148 ಸೀಟುಗಳ ಪ್ರವೇಶಕ್ಕೆ ಮಕ್ಕಳ ಆಯ್ಕೆಯಾಗಿತ್ತು. ಆ ಪೈಕಿ 77 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 408 ಸೀಟುಗಳು ಖಾಲಿ ಉಳಿದಿವೆ.

ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿಸೀಟಿನಷ್ಟೂ ಅರ್ಜಿಗಳೂ ಸಲ್ಲಿಕೆಯಾಗಿರದ್ದರಿಂದ ಅಲ್ಲಿ ಸೀಟುಗಳು ಖಾಲಿ ಉಳಿಯುವುದು ಖಾತ್ರಿಯಾಗಿತ್ತು. ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದ  ತಾಲ್ಲೂಕಗಳಲ್ಲಿಯೂ ಸೀಟುಗಳು ಖಾಲಿ ಉಳಿದಿವೆ.

ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚು 257 ವಿದ್ಯಾರ್ಥಿಗಳಿಗೆ, ಅತಿ ಕಡಿಮೆ ಎಂದರೆ ಬೀಳಗಿ ತಾಲ್ಲೂಕಿನಲ್ಲಿ ಕೇವಲ 27 ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಅವಕಾಶವಿತ್ತು.

ಜಮಖಂಡಿ ತಾಲ್ಲೂಕಿನಲ್ಲಿ 141 ಹಾಗೂ ಬೀಳಗಿ ತಾಲ್ಲೂಕಿನಲ್ಲಿ 24 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಕನ್ನಡ ಮಾಧ್ಯಮ ಹೊಂದಿರುವ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿನ ಆರ್‌ಟಿಇ ಖೋಟಾದ ಸೀಟುಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರು ನಿರಾಸಕ್ತಿತೋರಿಸುತ್ತಿದ್ದಾರೆ.

  ಸರ್ಕಾರಿ ಅಥವಾ ಅನುದಾನಿತ ಶಾಲೆಗಳ ವ್ಯಾಪ್ತಿಯ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಬರುವ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರ್‌ಟಿಇ ಪಟ್ಟಿಯಿಂದ ಹೊರಗಿಟ್ಟ ಮೇಲೆ ಆರ್‌ಟಿಇ ಅಡಿ ಸೀಟುಗಳ
ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಪ್ರಮುಖ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಪಟ್ಟಿಯಿಂದ ಹೊರಗುಳಿದಿರುವುದರಿಂದ ಸೀಟು ಪಡೆಯಲು ಇದ್ದ ಪೈಪೋಟಿಯೂ ಕಡಿಮೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.