ಗುಳೇದಗುಡ್ಡ: ಸಂಸ್ಕೃತ ಸರಳ ಭಾಷೆ. ಸಂಸ್ಕೃತ ಕಲಿಕೆಯಿಂದ ಸಂಸ್ಕಾರ ಬೆಳೆಯುತ್ತದೆ. ದೇವ ಭಾಷೆ ಎನಿಸಿಕೊಂಡ ಸಂಸ್ಕೃತ ಭಾಷೆಯನ್ನು ಕಲಿತು ಬದುಕಿನಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಶಾರದಾ ವಿದ್ಯಾಲಯದ ಅಧ್ಯಕ್ಷ ಸಂಗಮೇಶ ಉಂಕಿ ಹೇಳಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ಶ್ರೀಶಾರದಾ ವಿದ್ಯಾಲಯ ಗುಳೇದಗುಡ್ಡ, ಸಂಸ್ಕೃತ ಭಾರತಿ ಬೆಂಗಳೂರು, ವಿಶ್ವ ಹಿಂದೂ ಪರಿಷತ್ ಹಾಗೂ ದುರ್ಗಾವಾಹಿನಿ ಸಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 10 ದಿನಗಳ ಸಂಸ್ಕೃತ ಸಂಭಾಷಣ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ವಿದೇಶಗಳಲ್ಲಿ ಈಗ ಸಂಸ್ಕೃತ ಕಲಿಕೆ ನಡೆಯುತ್ತಿದೆ. ಭಾರತೀಯರಾದ ನಾವು ಎಲ್ಲ ಭಾಷೆಗಳೊಂದಿಗೆ ಈ ಭಾಷೆಯನ್ನು ಕಲಿಯಬೇಕು ಎಂದರು.
ಶಾರದಾ ವಿದ್ಯಾಲಯದ ಸದಸ್ಯ ಆನಂದ ತಿಪ್ಪಾ, ಕೋಟೆಕಲ್ ಶಾರದಾ ಸಂಸ್ಕೃತ ಪಾಠಶಾಲೆ ಶಿಕ್ಷಕಿ ಮಾಲಾ ರಾಜನಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ರಾಘವೇಂದ್ರ ಬಸ್ಮೆ, ಸಂಘಟನಾ ಕಾರ್ಯದರ್ಶಿ ಗಣೇಶ ಸಿಂದೆ, ದುರ್ಗಾ ವಾಹಿನಿ ಸಂಯೋಜಕ ಸ್ನೇಹಾ ನರೇಗಲ, ದೀಪಾ ಉಂಕಿ, ಬಸವರಾಜ ಗೊಬ್ಬಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.