ಬಾಗಲಕೋಟೆ: ಪಾರ್ಸಲ್ ತಲುಪಿಸದ ಕಂಪನಿಗೆ ಪಾರ್ಸಲ್ ಹಾಕಿದ್ದ ವಸ್ತುಗಳ ಮೌಲ್ಯದ ಮೊತ್ತವನ್ನು ಶೇ 9ರ ಬಡ್ಡಿ ದರದೊಂದಿಗೆ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ನಗರದ ವಿಜನ್ ಟೆಕ್ನಾಲಜಿ ಮಾಲೀಕ ರೂಪಾ ದಾಸರ ಅವರು ಬೆಂಗಳೂರಿನ ಮೋಹನ ಎಲೆಕ್ಟ್ರೊ ಕಂಪನಿಯಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿದ್ದರು. ಅವುಗಳನ್ನು ಬೆಂಗಳೂರಿನ ಸಂಜನಾ ಟ್ರಾವೆಲ್ಸ್ ಮೂಲಕ ಪಾರ್ಸಲ್ ಕಳುಹಿಸಿದ್ದರು.
ಇಲ್ಲಿನ ಮೆಳ್ಳಿಗೇರಿ ಕಾಂಪ್ಲೆಕ್ಸ್‌ನಲ್ಲಿರುವ ಸಂಜನಾ ಟ್ರಾವೆಲ್ಸ್‌ನಲ್ಲಿ ರಶೀದಿ ತೋರಿಸಿ ವಸ್ತುಗಳನ್ನು ಕೇಳಿದಾಗ ಬಂದಿಲ್ಲ ಎಂದಿದ್ದಾರೆ. ಬಾಗಲಕೋಟೆ, ಬೆಂಗಳೂರು ಕಚೇರಿಗಳಲ್ಲಿ ವಿಚಾರಿಸಿದಾಗಲೂ ಸರಿಯಾದ ಉತ್ತರ ಬರಲಿಲ್ಲ.
ಆಯೋಗಕ್ಕೆ ರೂಪಾ ಅವರು ದೂರು ನೀಡಿದರು. ವಿಚಾರಣೆ ನಡೆಸಿದ ಆಯೋಗವು ಸೇವಾ ನೂನ್ಯತೆ ಎಸಗಿದ್ದರಿಂದ ದೂರುದಾರಿಗೆ ವಸ್ತುಗಳ ಮೌಲ್ಯ ₹24,488 ಅನ್ನು ಶೇ 9ರ ಬಡ್ಡಿ ದರದದೊಂದಿಗೆ, ಆಯೋಗಕ್ಕೆ ಅಲೆದಾಡಿಸಿದ್ದಕ್ಕೆ ₹10 ಸಾವಿರ ವಿಶೇಷ ಪರಿಹಾರ, ಪ್ರಕರಣ ಖರ್ಚು ₹5 ಸಾವಿರ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಡಿ.ವೈ. ಬಸಾಪುರ, ಸದಸ್ಯ ಕಮಲಕಿಶೋರ ಜೋಈ ಅವರನ್ನೊಳಗೊಂಡ ಪೀಠ ತೀರ್ಪು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.