ADVERTISEMENT

ಶಿವಸಂಚಾರ ನಾಟಕೋತ್ಸವ ಮಾ.14ರಿಂದ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 10:57 IST
Last Updated 13 ಮಾರ್ಚ್ 2019, 10:57 IST

ಬಾಗಲಕೋಟೆ: ಚಿತ್ರದುರ್ಗ ಜಿಲ್ಲೆ ಸಾಣೇಹಳ್ಳಿಯ ಶಿವಕುಮಾರ ಕಲಾಸಂಘದ ಶಿವಸಂಚಾರ ತಂಡದಿಂದ ಮೂರು ದಿನಗಳ ನಾಟಕೋತ್ಸವ ಮಾರ್ಚ್ 14ರಿಂದ 16ರವರೆಗೆ ನಡೆಯಲಿದೆ.

ನಗರದ ಗೆಳೆಯರ ಬಳಗ ಈ ನಾಟಕಗಳ ಹಬ್ಬವನ್ನು ಆಯೋಜಿಸಿದ್ದು, ಬಿ.ವಿ.ವಿ ಸಂಘದ ಪಾಲಿಟೆಕ್ನಿಕ್ ಕಾಲೇಜಿನ ಬಯಲು ವೇದಿಕೆಯಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಬಳಗದ ಕಾರ್ಯದರ್ಶಿ ಬಿ.ಬಿ.ಮುಕ್ಕುಪಿ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮಾರ್ಚ್ 14 ರಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿರುವ, ಸಿ.ಬಸವಲಿಂಗಯ್ಯ ನಿರ್ದೇಶನದ ‘ಗುರುಮಾತೆ ಅಕ್ಕ ನಾಗಲಾಂಬಿಕೆ’ ನಾಟಕ ಪ್ರದರ್ಶನಗೊಳ್ಳಲಿದೆ. ಮಾರ್ಚ್ 15 ರಂದು ಜ.ಹೊ.ನಾರಾಯಣಸ್ವಾಮಿ ರಚಿಸಿದ ಹಾಗೂ ಸವಿತಾ ಬೆಂಗಳೂರು ನಿರ್ದೇಶನದ ‘ನರಬಲಿ’ ಹಾಗೂ ಮಾರ್ಚ್ 16 ರಂದು ತುಳಸಿಗೇರಿಯ ಹನುಮಂತ ಹಾಲಿಗೇರಿ ರಚನೆಯ, ಮಾಲತೇಶ ಬಡಿಗೇರ ನಿರ್ದೇಶನದ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಎಂಬ ನಾಟಕಗಳ ಪ್ರದರ್ಶನಗೊಳ್ಳಲಿವೆ.

ADVERTISEMENT

ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ನಗರದ ಜನತೆ ಇದರ ಉಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಗೆಳೆಯರ ಬಳಗದ ಅಧ್ಯಕ್ಷ ಎನ್.ಆರ್.ಹಳ್ಳೂರ, ಖಜಾಂಚಿ ಡಾ. ಎಚ್.ಎಸ್.ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.