ಸಾಂದರ್ಭಿಕ ಚಿತ್ರ
ತೇರದಾಳ: ಇಲ್ಲಿನ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯ ಎರಡನೇ ಕಾಲುವೆ ಬಳಿ ಮಂಗಳವಾರ ಅಂಗಡಿಗೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿ ಅಂಗಡಿಯಲ್ಲಿದ್ದ ಪತ್ನಿಯ ಕೊಲೆಗೆ ಯತ್ನಿಸಿ ಅಂಗಡಿ ಸುಟ್ಟು ಹಾಕಲಾಗಿದೆ ಎಂದು ಪ್ರಕರಣ ದಾಖಲಾಗಿದೆ.
ಈ ಕುರಿತು ತೇರದಾಳ ಠಾಣೆಯಲ್ಲಿ ದೂರು ನೀಡಿರುವ ರುಕ್ಸಾನಾ, ತನ್ನ ಪತಿ ಅಲ್ಲಾಭಕ್ಷ ಮಕ್ತುಮಸಾಬ ದಫೆದಾರ ತನ್ನ ಅಕ್ಕನ ಮಕ್ಕಳಾದ ಹಮೀದಾಬಿ ಅಪ್ಪಾಲಾಲ ಡಾಲಾಯತ ಹಾಗೂ ಅಬ್ದುಲಅಜೀಜ ಅಪ್ಪಾಸಾಬ ಡಾಲಾಯತ ಜೊತೆ ಸೇರಿ ಅಂಗಡಿಗೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಅವಘಡದಿಂದ ಅಂಗಡಿಯಲ್ಲಿದ್ದ ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಕಿರಾಣಿ ಸಾಮಗ್ರಿಗಳು, ಬಂಗಾರ ಸೇರಿದಂತೆ ಮೂರು ಲಕ್ಷ ಮೌಲ್ಯದ ಹಾನಿ ಸಂಭವಿಸಿದೆ ಎಂದು ತಿಳಿಸಿದ್ದಾರೆ.
5ಗುಂಟೆ ಆಸ್ತಿ ವಿಷಯವಾಗಿದ್ದ ವ್ಯಾಜ್ಯ ಈಗಾಗಲೇ ನ್ಯಾಯಲಯದಲ್ಲಿದ್ದರೂ ಅದನ್ನು ಪಡೆಯಲು ಅಲ್ಲಾಭಕ್ಷ ಯತ್ನಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ತೇರದಾಳ ಠಾಣಾಧಿಕಾರಿ ಅಪ್ಪಣ್ಣ ಐಗಳಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳದ ಎಎಫ್ಎಸ್ಟಿಒ ಆರ್.ಟಿ.ಚಿವಟೆ, ಎಫ್ಡಿಗಳಾದ ಎಲ್.ವಿ.ಹಳ್ಳಿ, ಎಸ್.ವೈ.ಸಂದ್ರಿಮನಿ, ಎಲ್ಎಫ್ ಎಚ್.ಎಸ್.ಗೋಕಾಕ, ಎಫ್ಎಮ್ ಎಮ್.ಎಸ್.ಸತ್ತಿಗೌಡರ ಸೇರಿದಂತೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.