ADVERTISEMENT

ಸಿದ್ದರಾಮಯ್ಯ ಆರೋಪದಲ್ಲಿ ಹುರುಳಿಲ್ಲ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 13:15 IST
Last Updated 17 ಜುಲೈ 2020, 13:15 IST

ಬಾಗಲಕೋಟೆ: 'ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ತಿದ್ದುಪಡಿಯಿಂದ ಹೊಸದಾಗಿ ಕೃಷಿ ಮಾಡುವವರಿಗೆ, ಕೈಗಾರಿಕೆ ಸ್ಥಾಪಿಸುವವರಿಗೆ ಅವಕಾಶ ಆಗಲಿದೆ' ಎಂದುಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಭೂಸುಧಾರಣೆ ಕಾಯ್ದೆಯ ನಿಯಮ 79 ಉಲ್ಲಂಘಿಸಿದ ಆರೋಪ‍ದ ಮೇಲೆ ಇಲ್ಲಿಯವರೆಗೆ 1.80 ಲಕ್ಷ ಎಕರೆ ಭೂಮಿ ಖರೀದಿ ನಂತರ ವಿವಾದಕ್ಕೆ ಗ್ರಾಸವಾಗಿದೆ. ದಶಕಗಳ ಕಾಲ ಉಪವಿಭಾಗಾಧಿಕಾರಿ/ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ ಎಂದರು.

’ಇಲ್ಲಿಯವರೆಗೆ ಬರೀ 54 ಎಕರೆ ಮಾತ್ರ ಭೂಮಿ ವಾಪಸ್ ಪಡೆಯಲು ಆದೇಶಿಸಲಾಗಿದೆ. ಅದಕ್ಕೂ ಸಂಬಂಧಿಸಿದವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸಿಕ್ಕಾಪಟ್ಟೆ ಭ್ರಷ್ಟಾಚಾರ ನಡೆಸಲು ಈ ನಿಯಮಾವಳಿ ಅವಕಾಶ ಮಾಡಿಕೊಟ್ಟಿತ್ತು. ಸಾರ್ವಜನಿಕರಿಗೂ ಇದು ಕಿರಿಕಿರಿಯಾಗಿತ್ತು. ಕಾಯ್ದೆಯ ತಿದ್ದುಪಡಿ ಅದನ್ನು ತಪ್ಪಿಸಿದೆ‘ ಎಂದು ಶೆಟ್ಟರ್ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.