
ಪ್ರಜಾವಾಣಿ ವಾರ್ತೆ
ಬಾಗಲಕೋಟೆ: ಹಿಂದೂಸ್ತಾನಿ ಗಾಯಕ ಪಂ. ಸಿದ್ದರಾಮಯ್ಯ ಮಠಪತಿ ಅವರಿಗೆ ಬಸವ ಕಲ್ಯಾಣ ತಾಲ್ಲೂಕಿನ ಸುಕ್ಷೇತ್ರ ಹಾರಕೊಡದ ಹಿರೇಮಠ ಚೆನ್ನಬಸವೇಶ್ವರ ಸಂಸ್ಥಾನವು ಕಲ್ಯಾಣ ಕರ್ನಾಟಕ ಸಂಗೀತ ರತ್ನ ಪ್ರಶಸ್ತಿ ನೀಡಿದೆ.
ಪ್ರಶಸ್ತಿಯು ₹10 ಸಾವಿರ ನಗದು ಒಳಗೊಂಡಿದೆ. ಜ.31ರಂದು ಹಾರಕೊಡದಲ್ಲಿ ನಡೆಯುವ ಕಲ್ಯಾಣ ಕರ್ನಾಟಕದ ದಶಮಾನೋತ್ಸವ ಸಂಗೀತ ದಿನಾಚಾರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.