ADVERTISEMENT

ಡ್ರಗ್ಸ್ ಜಾಲದಲ್ಲಿ ಭಾಗಿ ಆರೋಪ, ಸಾಕ್ಷಿಗಳಿದ್ದರೆ ಕ್ರಮ ಕೈಗೊಳ್ಳಲಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 11:03 IST
Last Updated 14 ಸೆಪ್ಟೆಂಬರ್ 2020, 11:03 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ಪರ ನಟಿರಾಗಿಣಿ ಜೊತೆ ಸೇರಿ ಪ್ರಚಾರ ಮಾಡಿದ್ದಾರೆ ಅಂದಾಕ್ಷಣ ಬಿ.ವೈ.ವಿಜಯೇಂದ್ರ ಡ್ರಗ್ಸ್ ಜಾಲದಲ್ಲಿದ್ದಾರೆ ಅಂತ ಹೇಳಲಾ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಬಾದಾಮಿ ತಾಲ್ಲೂಕಿನ ಗೋವನಕೊಪ್ಪದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಫಾಸಿಲ್ ಜೊತೆ ಸಿದ್ದರಾಮಯ್ಯ, ಜಮೀರ್ ಫೋಟೋ ಏನು ಹೇಳುತ್ತೆ‘ ಸಚಿವ ಸಿ.ಟಿ. ರವಿ ಹೇಳಿಕೆ ವಿಚಾರಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.

’ನನಗೆ ಫಾಸಿಲ್ ಯಾರಂತ ಗೊತ್ತಿಲ್ಲ.ನಮ್ಮ ಜೊತೆ ಯಾರ್ಯಾರೋ ಫೋಟೋ ತೆಗೆಸಿಕೊಳ್ಳುತ್ತಾರೆ. ಕಳ್ಳರು ಬಂದು ಫೋಟೋ ತೆಗೆಸಿಕೊಳ್ಳಬಹುದು. ಫೋಟೋ ಯಾರ ಜೊತೆ ಇದೆ ಅನ್ನೋದು ಮುಖ್ಯವಲ್ಲ. ಡ್ರಗ್ಸ್ ಜಾಲದಲ್ಲಿ ಇದಾರಾ ಅನ್ನೋದು ಮುಖ್ಯ. ಸಾಕ್ಷಿಗಳಿದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ‘ ಎಂದರು.

ADVERTISEMENT

'ಬಿಜೆಪಿಯವರು ಫೋಟೊ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಶಾಸಕ ಜಮೀರ್ ಅಹಮದ್ಡ್ರಗ್ಸ್ ಜಾಲದಲ್ಲಿದ್ದಾನೆ ಅನ್ನೋದಕ್ಕೂ ಸಾಕ್ಷ್ಯ ಬೇಕಲ್ಲಪ್ಪಾ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.