ಬೀಳಗಿ: ಪಾಕ್ ನೆಲದಲ್ಲಿ ಭಯೋತ್ಪಾದಕ ತಾಣಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿರುವ ಭಾರತೀಯ ಸೈನ್ಯಕ್ಕೆ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.
ಸ್ಥಳೀಯ ಸಿದ್ದೇಶ್ವರ ಸೌಹಾರ್ದ ಸಹಕಾರ ಸಂಘದ ಕಾರ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಆಪರೇಷನ್ ಸಿಂಧೂರ ಹೆಸರಿನಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ ಮಾಡಿ 9 ಭಯೋತ್ಪಾದಕ ತಾಣಗಳನ್ನು ನೆಲಸಮ ಮಾಡುವಲ್ಲಿ ಅಪರಿಮಿತ ದಕ್ಷತೆ, ಸಾಮರ್ಥ್ಯ ಮೆರೆದಿರುವ ಭಾರತೀಯ ಸೇನೆ ದೇಶದ ಜನರ ವಿಶ್ವಾಸವನ್ನು ನೂರ್ಮಡಿ ಮಾಡಿದೆ. ಭಾರತದತ್ತ ಕೆಟ್ಟದೃಷ್ಟಿ ಬೀರುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ’ ಎಂದಿದ್ದಾರೆ.
ಹನಮಂತ ಕಾಖಂಡಕಿ, ಅಣವೀರಯ್ಯ ಪ್ಯಾಟಿಮಠ, ಎಂ ಎಸ್ ಕಾಳಗಿ, ಪಡಿಯಪ್ಪ ಕರಿಗಾರ, ರಾಜು ಬೊರ್ಜಿ, ಬಸವರಾಜ ಹಳ್ಳದಮನಿ, ಸಿದ್ದು ಸಾರಾವರಿ, ಬಿ.ಪಿ. ಪಾಟೀಲ, ರವಿ ಪಾಟೀಲ, ಸಂಗಪ್ಪ ಕಂದಗಲ್ಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.