
ಬೀಳಗಿ: ‘ಮನುಷ್ಯ ತನಗಾಗಿ ಬದುಕದೆ ಇತರರ ಒಳಿತಿಗಾಗಿ ಬದುಕುವುದು ನಿಜವಾದ ಜೀವನ. ಈ ಬದುಕು ದೇವರು ಕೊಟ್ಟ ಅಮೃತ ನಿಧಿ. ಅದಕ್ಕೆ ಗೌರವ ಬರುವಂತಹ ಜೀವನ ಎಲ್ಲರದಾಗಲಿ’ ಎಂದು ನಿವೃತ್ತ ಪ್ರಾಚಾರ್ಯ ಎಚ್.ಬಿ. ಧರ್ಮಣ್ಣವರ ಹೇಳಿದರು.
ಸ್ಥಳೀಯ ಕಾಳಿಕಾಕಮಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸ್ನೇಹಿತರ ಸಹಕಾರ ಬಳಗದ ವಾರ್ಷಿಕೋತ್ಸವ ಹಾಗೂ ಬೀಳಗಿ ಸ್ನೇಹಿತರ ಅಭಿವೃದ್ಧಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಬೀಳಗಿ– ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಮನುಷ್ಯನ ಜನ್ಮ ಶಾಶ್ವತವಲ್ಲ, ಆದರೆ ಬದುಕಿನುದ್ದಕ್ಕೂ ಪರೋಪಕಾರಮಯ ಜೀವನ ನಿಮ್ಮೆಲ್ಲರದಾಗಲಿ’ ಎಂದು ಹಾರೈಸಿದರು.
ಅರವಿಂದ ಕುಲಕರ್ಣಿ ಮಾತನಾಡಿ, ‘ಪ್ರತಿವರ್ಷ ಬಸವ ಜಯಂತಿ ದಿನ ಲೇಖನ ಬಿಡುಗಡೆ, ಪರಿಸರ ದಿನಾಚರಣೆ, ರಕ್ತದಾನ ಶಿಬಿರ, ಗೋಶಾಲೆ ನಿರ್ಮಾಣ, ಪರಿಸರ ಸ್ವಚ್ಛತಾ ಕಾರ್ಯ, ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸುವ ಉದ್ದೇಶ ನಮ್ಮ ಸಂಸ್ಥೆಯದ್ದಾಗಿದೆ’ ಎಂದರು.
ವಿಜಯಪುರ ಪ್ರೆಸಿಡೆನ್ಸಿ ಕಾಲೇಜಿನ ಪ್ರಾಚಾರ್ಯೆ ಸುಮಾ ಬೊಳರೆಡ್ಡಿ ಉಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ಕಟಗೇರಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ರವಿ ಜೈನಾಪೂರ ಸಂಘದ 4 ನೇ ವರ್ಷದ ವರದಿ ವಾಚಿಸಿದರು. ಎಸ್.ಎಸ್.ಖ್ಯಾಡಿ, ಫರಿದಾಬಾನು ಪಟ್ಟದಕಲ್ಲ, ಶ್ರೀಶೈಲ ದೊಡಮನಿ, ಸುವರ್ಣಾ ವಿಶ್ವಕರ್ಮ, ಶಂಕರ ಬಡಿಗೇರ, ಬೀಳಗಿ ಅಭಿವೃದ್ಧಿ ಸಂಘದ ಖಜಾಂಚಿ ರವಿ ಸವದಿ, ಕಾನೂನು ಸಲಹೆಗಾರ ಎಸ್.ಜಿ. ವಸ್ತ್ರದ, ಸದಸ್ಯರಾದ ಎಸ್.ಎ. ಎತ್ತಿನಮನಿ, ಕಾಡಪ್ಪ ಕುಂಬಾರ, ಮುದ್ದು ಡಂಗಿ, ರವಿ ದೇಸಾಯಿ, ಯಾಸಿನ್ ದರ್ಗಾ ನಜಮಾ ಮಳಗಿ ಇದ್ದರು.
ಸಾಧಕರು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.