ADVERTISEMENT

ತಂದೆಯ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 14:39 IST
Last Updated 4 ಏಪ್ರಿಲ್ 2025, 14:39 IST
ಬಾದಾಮಿ ಸಮೀಪದ ಹೆಬ್ಬಳ್ಳಿ ಗ್ರಾಮದ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರದಲ್ಲಿ ತಂದೆಯ ಸಾವಿನ ದುಃಖದಲ್ಲಿಯೇ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಆತ್ಮಸ್ಥೈರ್ಯವನ್ನು ತುಂಬಿದರು.
ಬಾದಾಮಿ ಸಮೀಪದ ಹೆಬ್ಬಳ್ಳಿ ಗ್ರಾಮದ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರದಲ್ಲಿ ತಂದೆಯ ಸಾವಿನ ದುಃಖದಲ್ಲಿಯೇ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಆತ್ಮಸ್ಥೈರ್ಯವನ್ನು ತುಂಬಿದರು.   

ಬಾದಾಮಿ: ಹೆಬ್ಬಳ್ಳಿ ಗ್ರಾಮದ ಬಿ.ಸಿ. ಗದ್ದಿಗೌಡರ ಸರ್ಕಾರಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರದಲ್ಲಿ ತಂದೆಯ ಸಾವಿನ ದುಃಖದಲ್ಲಿಯೇ ವಿದ್ಯಾರ್ಥಿನಿ ಅಕ್ಷತಾ ಸಣ್ಣಪಕೀರಪ್ಪ ತಳವಾರ ಹಿಂದಿ ಪರೀಕ್ಷೆಗೆ ಹಾಜರಾದರು.

ಗುರುವಾರ ರಾತ್ರಿ ತಂದೆ ಲಖಮಾಪೂರ ಗ್ರಾಮದ ಸಣ್ಣಪಕೀರಪ್ಪ ತಳವಾರ ಮೃತಪಟ್ಟಿದ್ದರು. ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗಿ ನಂತರ ತಂದೆಯ ಅಂತ್ಯ ಸಂಸ್ಕಾರಕ್ಕೆ ತೆರಳಿದಳು.

ಪರೀಕ್ಷೆಗೆ ಹಾಜರಾಗಲು ಮುಖ್ಯ ಶಿಕ್ಷಕ ಎ.ಸಿ. ಹಿರೇನಿಂಗನಗೌಡರ ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಸ್.ಎಚ್. ಪಾಟೀಲ ವಿದ್ಯಾರ್ಥಿನಿಗೆ ಆತ್ಮಸ್ಥೈರ್ಯ ತುಂಬಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.