
ಬೀಳಗಿ: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಸಾಧನೆಯ ಕನಸು ಕಂಡು ಕುಳಿತರೆ ಸಾಕಾಗುವುದಿಲ್ಲ. ಅವುಗಳನ್ನು ಸಾಕಾರಗೊಳಿಸುವ ದೃಢಚಿತ್ತವನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದು ಶಾಸಕ ಜೆ.ಟಿ.ಪಾಟೀಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸ್ಥಳೀಯ ರುದ್ರಗೌಡ ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಕಾಲೇಜಿನಲ್ಲಿ ಏರ್ಪಡಿಸಿದ 2022-23 ನೇ ಸಾಲಿನ ವಿಶೇಷ ಅಭಿವೃದ್ದಿ ಯೋಜನೆಯಡಿ ನಿರ್ಮಾಣವಾದ ಕಾಲೇಜು ಸಭಾಭವನದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚಾರ್ಯೆ ಶ್ರೀದೇವಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕಾಲೇಜಿಗೆ ಸರ್ಕಾರದಿಂದ ಎಲ್ಲ ರೀತಿಯ ಪೂರಕವಾದ ಸೌಕರ್ಯಗಳು ಲಭ್ಯವಾಗುತ್ತಿರುವುದು ಸಂತಸದ ವಿಷಯ. ಇವುಗಳ ಸದುಪಯೋಗ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಶೋಕ ಕೊಲಾರ, ಜೊತಿಬಾ ಅವತಾಡೆ, ಸಿದ್ದು ದಳವಾಯಿ, ಬಿ.ವೈ.ಲೊನಾರೆ, ರಾಜು ತೋಳಮಟ್ಟಿ, ಹನಮಂತ ಬಿದರಿ, ಬಾಗಲಕೋಟ ಎಇಇ ಮಂಜುನಾಥ ಹರಿಪಲ್ಲೆ, ಅರುಣ ಗರಸಂಗಿ, ಪರಶುರಾಮ ಮಾಹಾರಾಜನವರ, ಅಮಿನುದ್ದಿನ ಬಡೆಖಾನ,ರವಿ ಕಾಂಬಳೆ, ಶ್ರೀದೇವಿ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.