ADVERTISEMENT

ಹುನಗುಂದ | ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ: ಸಂಧ್ಯಾ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 2:25 IST
Last Updated 16 ನವೆಂಬರ್ 2025, 2:25 IST
ಹುನಗುಂದದ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಜವಾಹರಲಾಲ್ ನೆಹರು ಜನ್ಮದಿನ ಆಚರಣೆ ಮತ್ತು ಪಾಲಕ, ಪೋಷಕ ಮತ್ತು ಶಿಕ್ಷಕರ ಮಹಾಸಭೆಯನ್ನು ಎಸ್.ವಿ.ಎಂ.ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಸಂಧ್ಯಾ ಎಚ್.ವಿ. ಉದ್ಘಾಟಿಸಿದರು
ಹುನಗುಂದದ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಜವಾಹರಲಾಲ್ ನೆಹರು ಜನ್ಮದಿನ ಆಚರಣೆ ಮತ್ತು ಪಾಲಕ, ಪೋಷಕ ಮತ್ತು ಶಿಕ್ಷಕರ ಮಹಾಸಭೆಯನ್ನು ಎಸ್.ವಿ.ಎಂ.ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಸಂಧ್ಯಾ ಎಚ್.ವಿ. ಉದ್ಘಾಟಿಸಿದರು   

ಹುನಗುಂದ: ‘ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಓದಿನೊಂದಿಗೆ ಸಂಸ್ಕಾರಯುತರಾಗಿ ಭವಿಷ್ಯ ರೂಪಿಸಿಕೊಳ್ಳುವುದು ಅಗತ್ಯ. ಪಾಲಕರು ಮತ್ತು ಶಿಕ್ಷಕರ ಆಶಯಗಳಿಗೆ ಪೂರಕವಾಗಿ ಸ್ಪಂದಿಸಿ ಮನೆ ಮತ್ತು ವಿದ್ಯಾಸಂಸ್ಥೆಯ ಕೀರ್ತಿ ಹೆಚ್ಚಿಸಬೇಕು’ ಎಂದು ಇಳಕಲ್ ಎಸ್.ವಿ.ಎಂ.ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಸಂಧ್ಯಾ ಎಚ್. ವಿ ಕರೆ ನೀಡಿದರು.

ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ಜವಾಹರಲಾಲ್ ನೆಹರು ಅವರ ಜನ್ಮದಿನ ಆಚರಣೆ ಮತ್ತು ಪಾಲಕ, ಪೋಷಕ ಮತ್ತು ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ, ವಕೀಲ ಮಹಾಂತೇಶ ಅವಾರಿ, ‘ನೆಹರು ಅವರ ವ್ಯಕ್ತಿತ್ವ ಮತ್ತು ಕೊಡುಗೆಗಳನ್ನು ಸ್ಮರಿಸಬೇಕು. ವಿದ್ಯಾರ್ಥಿ ಜೀವನ ಅಮೂಲ್ಯ. ಈ ಹಂತದಲ್ಲಿ ಸಕಾರಾತ್ಮಕ ಮನೋಭಾವ ಹೆಚ್ಚಿಸಿಕೊಳ್ಳುವ ಮೂಲಕ ನಾಡಿನ ಸತ್ಪ್ರಜೆಗಳಾಗಬೇಕು. ಆಧುನಿಕ ಆಡಂಬರದ ಮೋಹಗಳಿಂದ ದೂರವಿರಬೇಕು’ ಎಂದರು.

ADVERTISEMENT

ಸಿಡಿಸಿ ಸದಸ್ಯ ಚಂದ್ರಶೇಖರ ಚಟ್ನಿಹಾಳ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಹುಚ್ಚೇಶ ಕಾಳಹಸ್ತಿಮಠ, ಪ್ರಭು ನಾಗೂರ, ಮುತ್ತಣ್ಣ ಬ್ಯಾಳಿ, ಅಶ್ವಿನಿ ಹುಚನೂರ, ರವಿ ಹಳಪೇಟಿ, ಮುತ್ತಣ್ಣ ಗಂಜಿಹಾಳ, ರೇಖಾ ಬ್ಯಾಳಿ ಇದ್ದರು.

ಪ್ರಾಚಾರ್ಯ ಶರಣಪ್ಪ ಹೂಲಗೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಂತಿ ಬೆಣಗಿ ಪ್ರಾರ್ಥಿಸಿದರು. ಛಾಯಾ ಪುರಂದರೆ ಸಂವಿಧಾನ ಪೀಠಿಕೆ ಬೋಧಿಸಿದರು. ಐ.ಎಚ್.ನಾಯಿಕ ಅತಿಥಿಗಳನ್ನು ಪರಿಚಯಿಸಿದರು. ಎನ್.ವೈ.ನದಾಫ ನಿರೂಪಿಸಿದರು. ಎಚ್.ಟಿ. ಅಗಸಿಮುಂದಿನ ವಂದಿಸಿದರು. ನಂತರ ಪಾಲಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.