ಬಾಗಲಕೋಟೆ: ಹುಲಿಗೆಮ್ಮ ದೇವಿ (ಪ.ಜಾ.) ಸೇವಾ ಸಂಘದ ವತಿಯಿಂದ ಹಮಾಲರ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ಸಾಹಿತಿ ರಾಜು ಯಾದವ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. ಅಲ್ಲಿನ ಬಡ ಮಕ್ಕಳಿಗೆ ಸಂಘ-ಸಂಸ್ಥೆಗಳ ಸಹಕಾರ, ಪ್ರೋತ್ಸಾಹ ತುಂಬಾ ಅಗತ್ಯವಾಗಿದೆ ಎಂದರು.
ಸಂಘದ ಅಧ್ಯಕ್ಷ ನಿಂಗರಾಜ ಮಬ್ರುಮಕರ ಮಾತನಾಡಿ, ಮೂರು ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಶಿಕ್ಷಣ ಮಾತ್ರ ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಧನವಾಗಿದೆ ಎಂದು ಹೇಳಿದರು.
ರೇಣುಕಾ ನ್ಯಾಮಗೌಡರ, ಯೋಗಗುರುಗಳಾದ ಎನ್.ಬಿ. ಮದಕಟ್ಟಿ, ಓಂಕಾರ ದಳವಾಯಿ, ಮುಖ್ಯ ಶಿಕ್ಷಕಿ ಎಸ್.ಸಿ. ಮೆಣಸಗಿ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.