ADVERTISEMENT

ಶ್ರದ್ಧೆ, ಶಿಸ್ತು ತ್ಯಾಗದಿಂದ ಯಶಸ್ಸು ಲಭ್ಯ: ಬಸವರಾಜ ಕೊಣ್ಣೂರ

​ಪ್ರಜಾವಾಣಿ ವಾರ್ತೆ
Published 16 ಮೇ 2025, 13:46 IST
Last Updated 16 ಮೇ 2025, 13:46 IST
ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಕೊಣ್ಣೂರ ಮಾತನಾಡಿದರು
ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಕೊಣ್ಣೂರ ಮಾತನಾಡಿದರು   

ರಬಕವಿ ಬನಹಟ್ಟಿ: ‘ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಪಡೆದುಕೊಳ್ಳಲು ಶ್ರದ್ಧೆ, ಶಿಸ್ತು ಮತ್ತು ತ್ಯಾಗ ಮುಖ್ಯವಾಗಿದೆ. ತಂದೆ, ತಾಯಿ ಮತ್ತು ಗುರುಗಳಲ್ಲಿ ಭಯ, ಭಕ್ತಿ ಮತ್ತು ಗೌರವ ಹೊಂದಿದ ವ್ಯಕ್ತಿಯು ಜೀವನದಲ್ಲಿ ಎಲ್ಲ ಪಡೆದುಕೊಳ್ಳಲು ಸಾಧ್ಯ’ ಎಂದು ಕೊಣ‍್ಣೂರ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಕೊಣ್ಣೂರ ಹೇಳಿದರು.

ಇಲ್ಲಿನ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ  ಶುಕ್ರವಾರ ನಡೆದ ಕ್ರೀಡೆ, ಸಾಂಸ್ಕೃತಿಕ, ಎನ್‌ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಸಕಾರಾತ್ಮಕ ಆಲೋಚನೆಗಳತ್ತ ಗಮನ ನೀಡಬೇಕು. ಉನ್ನತ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ನೀಡಬೇಕು. ಇಂದಿನ ದಿನಗಳಲ್ಲಿ ಸಾಕಷ್ಟು ಅವಕಾಶಗಳು ಇದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಜನತಾ ಶಿಕ್ಷಣ ಸಂಘದ ಗೌರವ ಕಾರ್ಯದರ್ಶಿ ರಾಜಶೇಖರ ಸೋರಗಾವಿ ಮಾತನಾಡಿ,  ಕಾಲೇಜು ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಎಲ್ಲ ಸೌಲಭ್ಯಗಳನ್ನು ನೀಡುವುದಾಗಿ ತಿಳಿಸಿದರು.

ಸಂಘದ ಸದಸ್ಯ ಭೀಮಶಿ ಮಗದುಮ್, ಪ್ರಾಚಾರ್ಯ ಜಿ.ಆರ್.ಜುನ್ನಾಯ್ಕರ್, ಮನೋಹರ ಶಿರಹಟ್ಟಿ, ಮಂಜುನಾಥ ಬೆನ್ನೂರ, ಗೀತಾ ಸಜ್ಜನ, ವಿಜಯಲಕ್ಷ್ಮಿ ಮಾಚಕನೂರ, ಜಿ.ಎಸ್. ಪಾಟೀಲ, ವಿ.ವೈ.ಪಾಟೀಲ ಮಾತನಾಡಿದರು. ವಿದ್ಯಾರ್ಥಿಗಳು ಅನಿಸಿಕೆ  ತಿಳಿಸಿದರು.

ಜೆಎಸ್ಎಸ್ ಸಂಘದ ಅಧ್ಯಕ್ಷ ಸುಭಾಸಚಂದ್ರ ಭದ್ರನವರ ಅಧ್ಯಕ್ಷತೆ ವಹಿಸಿದ್ದರು. ಎಂ.ಜಿ.ಕೆರೂರ, ಶ್ರೀಶೈಲ ಯಾದವಾಡ, ಮಹಾದೇವಿ ಕೊಳಕಿ, ಪ್ರಕಾಶ ಕೆಂಗನಾಳ, ರೇಶ್ಮಾ ಗಜಾಕೋಶ, ಎಸ್.ಪಿ. ನಡೋಣಿ, ಎಸ್.ಬಿ.ಉಕ್ಕಲಿ, ವಿಶ್ವಜ ಕಾಡದೇವರ, ರಶ್ಮಿ ಕೊಕಟನೂರ, ಶ್ವೇತಾ ಮಠದ, ಅವಿನಾಶ ಹಟ್ಟಿ, ಐ.ಜಿ.ಫಣಿಬಂದ್, ಎನ್.ಬಿ.ಹೊಸಪೇಟಿ, ಅಮೃತಾ ಬಾಗಲಕೋಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.