ಬಾಗಲಕೋಟೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಖಂಡಿಸಿ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮಾಡಲಾಯಿತು.
ಈ ಕೃತ್ಯವು ನ್ಯಾಯಾಂಗದ ಗೌರವಕ್ಕೆ ಧಕ್ಕೆ ತರುವುದರ ಜೊತೆಗೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ.
ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಘಟನೆಗಳನ್ನು ಖಂಡಿಸಬೇಕು ಎಂದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜ್ಯಯನಮಠ, ಮುಖಂಡರಾದ ಚಂದ್ರಶೇಖರ ರಾಠೋಡ, ಪರಶುರಾಮ ಮಹಾರಾಜನವರ, ರಮೇಶ ಬದ್ನೂರ ಮಾತನಾಡಿ, ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನ್ಯಾಯಾಂಗದ ಪ್ರತಿಷ್ಠೆ ಹಾಗೂ ಸಂವಿಧಾನ ಬದ್ಧ ಸಂಸ್ಥೆಗಳ ಗೌರವವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ನಿಟ್ಟಿನಲ್ಲಿ ಸದಾ ಜಾಗೃತರಾಗಿರಬೇಕು. ನ್ಯಾಯಾಂಗದ ಮೇಲಿನ ದಾಳಿಗಳನ್ನು ತಡೆಯಬೇಕು ಎಂದರು.
ಪ್ರಚಾರ ಸಮಿತಿಯ ಜಿಲ್ಲಾ ಅಧ್ಯಕ್ಷ ನಾಗರಾಜ ಹದ್ಲಿ, ಕಾನೂನು ಘಟಕದ ಜಿಲ್ಲಾಧ್ಯಕ್ಷ ಎನ್ ಬಿ ಗಸ್ತಿ, ರಾಜು ಮನ್ನಿಕೇರಿ ಹನಮಂತ ಡೋಣಿ, ಸಿದ್ದಪ್ಪ ಕೋಲಾರ, ಶ್ರೀಧರ ನೀಲನಾಯಕ, ಹಾಜಿಸಾಬ್ ದಂಡಿನ, ಅಜಯ ಕಪಾಟೆ, ಮಂಜುಳಾ ಕಮತಗಿ, ಮಂಜುಳಾ ಭುಸಾರೆ, ರೇಣುಕಾ ನಾರಾಯಣಕರ ಶ್ರವಣ ಖಾತೆದಾರ, ವೈ.ವೈ. ತಿಮ್ಮಾಪುರ, ಸುನಿಲ ಕಿರಸೂರ, ಮಹ್ಮದ್ ಖಯೂಮ್, ತಿಪ್ಪಣ್ಣ, ಡಿ.ಕೆ. ಬಸವರಾಜ ಇದ್ದರು.
ಖಂಡಿಸಿ ಮನವಿ: ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದಿರುವುದನ್ನು ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಜೈ ಭೀಮ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜ ಒಡೆದು ಹಾಕಿ ಪರಸ್ಪರ ದ್ವೇಷ ಹುಟ್ಟು ಹಾಕುವ ಮನಸ್ಸುಗಳು, ರಾಕೇಶ್ ಕಿಶೋರನಂತಹ ಮನೋವಾದಿ ಮನಸ್ಸುಗಳು ಸಮಾಜದಲ್ಲಿವೆ. ಅವುಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಹನಮಂತ ಚಿಮ್ಮಲಗಿ, ಮುತ್ತಣ್ಣ ಮೇತ್ರಿ, ಸಂಗಣ್ಣ ಮಡ್ಡಿ, ಶಂಕ್ರಪ್ಪ ದೊಡ್ಡಮನಿ, ಮಾರುತಿ ಮರೆಗುದ್ದಿ ಮತ್ತಿತರರು ಇದ್ದರು.
ಮುಖ್ಯ ನ್ಯಾಯಮೂರ್ತಿ ಮೇಲಿನ ದಾಳಿಯನ್ನು ಬಿಜೆಪಿ ಇಲ್ಲಿಯವರೆಗೂ ಖಂಡಿಸಿಲ್ಲ. ದಾಳಿಯನ್ನು ಬೆಂಬಲಿಸುವುದೇ? ಈಗ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕುರಮೇಶ ಬದ್ನೂರ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಕಾನೂನು ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.