ADVERTISEMENT

ಬಾಲಕಿಯರ ಪ್ರೌಢಶಾಲೆಗೆ ಶಿಕ್ಷಕಿಯಿಂದ ಟಿವಿ ಕೊಡುಗೆ 

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 1:23 IST
Last Updated 7 ಸೆಪ್ಟೆಂಬರ್ 2020, 1:23 IST
ಇಳಕಲ್‍ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಇದೇ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಗ್ಗಲಮರಿಯ ಪ್ರೇಮಲತಾ ಬಗನಾಳ ಅವರು 36 ಸಾವಿರ ಮೌಲ್ಯದ ಟಿವಿ ಕೊಡುಗೆಯಾಗಿ ನೀಡಿದರು.
ಇಳಕಲ್‍ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಇದೇ ಪ್ರೌಢಶಾಲೆಯ ಹಳೇ ವಿದ್ಯಾರ್ಥಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಗ್ಗಲಮರಿಯ ಪ್ರೇಮಲತಾ ಬಗನಾಳ ಅವರು 36 ಸಾವಿರ ಮೌಲ್ಯದ ಟಿವಿ ಕೊಡುಗೆಯಾಗಿ ನೀಡಿದರು.   

ಇಳಕಲ್‍ : ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಹಳೆಯ ವಿದ್ಯಾರ್ಥಿ, ಸಮೀಪದ ಗುಗ್ಗಲಮರಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರೇಮಲತಾ ಬಗನಾಳ (ಗೋಟೂರ) ಅವರು ತಾವು ಕಲಿತ ಶಾಲೆಗೆ 36ಸಾವಿರ ರೂಪಾಯಿ ಮೌಲ್ಯದ 55 ಇಂಚಿನ ಟಿವಿ ದೇಣಿಗೆಯಾಗಿ ನೀಡಿದರು.

ವಿದ್ಯಾರ್ಥಿನಿಯರ ಕಲಿಕೆಗೆ ಟಿವಿ ಅಗತ್ಯವಿರುವುದನ್ನು ಮನಗಂಡು ಟಿವಿ ನೀಡಿದ್ದಾರೆ. ಕೋವಿಡ್‍ 19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಬೋಧನೆಯನ್ನು ಆನ್‍ಲೈನ್‍ ಹಾಗೂ ಚಂದನ ವಾಹಿನಿ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸುವುದಕ್ಕಾಗಿ ವಿದ್ಯುನ್ಮಾನ ಉಪಕರಣಗಳ ಅಗತ್ಯವನ್ನು ತಿಳಿದು ಈ ಕಾರ್ಯಕ್ಕೆ ಮುಂದಾದೆ ಎಂದು ಪ್ರೇಮಲತಾ ಹೇಳಿದರು. ಟಿವಿ ಸ್ವೀಕರಿಸಿದ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಅವರು ಪ್ರೇಮಲತಾ ಆವರಿಗೆ ಎಸ್‍ಡಿಎಂಸಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT