ADVERTISEMENT

ಹಿಪ್ಪರಗಿ ಬ್ಯಾರೇಜ್‌ 7ನೇ ಗೇಟ್‌ನಲ್ಲಿ ತಾಂತ್ರಿಕ ದೋಷ

15 ಸಾವಿರ ಕ್ಯೂಸೆಕ್ ಹೊರಹರಿವು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 14:20 IST
Last Updated 9 ಅಕ್ಟೋಬರ್ 2024, 14:20 IST
ರಬಕವಿ ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನ 7ನೇ ನಂಬರಿನ ಗೇಟ್‌ನಲ್ಲಿ ಉಂಟಾದ ತೊಂದರೆಯನ್ನು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡೀಕರ ಪರಿಶೀಲನೆ ಮಾಡುತ್ತಿರುವುದು
ರಬಕವಿ ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನ 7ನೇ ನಂಬರಿನ ಗೇಟ್‌ನಲ್ಲಿ ಉಂಟಾದ ತೊಂದರೆಯನ್ನು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡೀಕರ ಪರಿಶೀಲನೆ ಮಾಡುತ್ತಿರುವುದು   

ರಬಕವಿ ಬನಹಟ್ಟಿ: ಸಮೀಪದ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಗೇಟ್ ಮುಚ್ಚುವ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದಾಗಿ ಮುಚ್ಚಲು ಸಾಧ್ಯವಾಗದೆ ಇರುವುದರಿಂದ 15 ಸಾವಿರ ಕ್ಯೂಸೆಕ್ ನೀರಿನ ಹೊರಹರಿವು ಇದೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬಿಡೀಕರ ತಿಳಿಸಿದರು.

ಎರಡು ದಿನಗಳಿಂದ ಗೇಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ವಿಷಯವನ್ನು ಬ್ಯಾರೇಜ್ ಎಂಜಿನಿಯರ್ ಗಮನಕ್ಕೆ ತಂದಿದ್ದರು. ಬುಧವಾರ ಪರಿಶೀಲಿಸಲಾಗಿ ಅಥಣಿಯಿಂದ ರಬಕವಿ ಬನಹಟ್ಟಿ ತಾಲ್ಲೂಕಿನ ಕಡೆಗೆ ಇರುವ 7ನೇ ನಂಬರಿನ ಗೇಟ್‌ನಲ್ಲಿ ತೊಂದರೆಯಾಗಿದೆ.

ಗೇಟ್ ಅಳವಡಿಕೆಯಲ್ಲಿ ಉಂಟಾದ ತೊಂದರೆಯಿಂದಾಗಿ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ಹೊರ ಹರಿವು ಇದ್ದು, ಕೃಷ್ಣಾ ನದಿಗೆ ಮಹಾರಾಷ್ಟ್ರ ಮತ್ತು ಸ್ಥಳೀಯ ಉಪ ನದಿಗಳಿಂದ 12 ಸಾವಿರ ಕ್ಯೂಸೆಕ್ ಒಳ ಹರಿವು ಇದೆ.

ADVERTISEMENT

ಒಟ್ಟು 6 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 4.5 ಟಿಎಂಸಿ ನೀರಿನ ಸಂಗ್ರಹವಿದೆ.

ಸದ್ಯ ಕೆಎನ್ಎನ್‌ಎಲ್ ಅಧೀಕ್ಷಕರು, ಮತ್ತು ಬ್ಯಾರೇಜ್ ಸಹಾಯಕ ಎಂಜಿನಿಯರ್ ಸ್ಥಳದಲ್ಲಿದ್ದು ಗೇಟ್ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ದುರಸ್ತಿ ಕಾರ್ಯ ನಡೆದಿದ್ದು, ಬುಧವಾರ ರಾತ್ರಿ ಇಲ್ಲವೆ ನಾಳೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ನೀರಿನ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬಿಡೀಕರ ತಿಳಿಸಿದರು.

ಹಿಪ್ಪರಗಿ ಜಲಾಶಯದಲ್ಲಿ ಹೊರ ಹರಿವು ಇರುವುದರಿಂದ ರಬಕವಿ ಬನಹಟ್ಟಿ ಸಮೀಪದಲ್ಲಿರುವ ಹಿನ್ನೀರು ಸಂಪೂರ್ಣವಾಗಿ ಖಾಲಿಯಾಗಿರುವುದು.

ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ಬ್ಯಾರೇಜ್ ಎಇಇ ಶಿವಮೂರ್ತಿ, ವಿ.ಎನ್.ನಾಯಕ ಸೇರಿದಂತೆ ಇನ್ನೀತರ ಅಧಿಕಾರಿಗಳು ಇದ್ದರು.

ಹಿಪ್ಪರಗಿ ಗೇಟ್ ದುರಸ್ತಿ ಕಾರ್ಯದಿಂದ ಹಿಪ್ಪರಗಿ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರು ಹೊರ ಹರಿವು ಇರುವುದರಿಂದ ಬನಹಟ್ಟಿ ಸಮೀಪದಲ್ಲಿರುವ ಬ್ಯಾರೇಜ್ ಹಿನ್ನೀರು ಸಂಪೂರ್ಣವಾಗಿ ಖಾಲಿಯಾಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.