ತೇರದಾಳ: ಇಲ್ಲಿಯ ಪುರಸಭೆ ನೂತನ ಅಧ್ಯಕ್ಷೆ ಶಿಲ್ಪಾ ಗೌತಮ ರೋಡಕರ ಹಾಗೂ ಉಪಾಧ್ಯಕ್ಷೆ ನಸ್ರಿನ್ಬಾನು ರಾಜೇಸಾಬ ನಗಾರ್ಜಿ ಅವರ ಪದಗ್ರಹಣ ಬುಧವಾರ ಜರುಗಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ-ಉಪಧ್ಯಾಕ್ಷರನ್ನು ಸನ್ಮಾನಿಸಿ ಮಾತನಾಡಿದ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಪ್ರವೀಣ ನಾಡಗೌಡ, ‘ತೇರದಾಳ ಪಟ್ಟಣದಲ್ಲಿ ಹಲವು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಆದ್ಯತೆ ನೀಡಿ. ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ನಡೆದುಕೊಳ್ಳುವ ಮೂಲಕ ಪಟ್ಟಣದ ಸೌಂದರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಿ’ ಎಂದು ಸಲಹೆ ನೀಡಿದರು.
ಅಧ್ಯಕ್ಷೆ ಶಿಲ್ಪಾ ಗೌತಮ ರೋಡಕರ ಮಾತನಾಡಿ, ‘ಮೊದಲು ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಅಧಿಕಾರಿಗಳು ಪುರಸಭೆಗೆ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಕೆಲಸ ಮಾಡಬೇಕು. ವೃದ್ಧರು, ಅಂಗವಿಕಲರು ಬಂದಾಗ ಹೆಚ್ಚಿನ ಕಾಳಜಿ ವಹಿಸಬೇಕು. ಸಾರ್ವಜನಿಕರು ಪುರಸಭೆಗೆ ಸಂದಾಯ ಮಾಡುವ ಎಲ್ಲ ರೀತಿಯ ತೆರಿಗೆ ಹಣವನ್ನು ಬಾಕಿ ಇಟ್ಟುಕೊಳ್ಳದೇ ಪಾವತಿಸುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.
ಮಾಜಿ ಅಧ್ಯಕ್ಷ ಹನಮಂತ ರೋಡನ್ನವರ, ಎಂ.ಕೆ. ತಹಸೀಲ್ದಾರ್, ಯೋಗೇಶ ರೋಡಕರ, ಸುರೇಶ ಕಬಾಡಗಿ, ಫಜಲ್ ಅತಾರಾವುತ್, ವಿಶ್ವನಾಥ ಹಿರೇಮಠ, ಮಹಾಂತೇಶ ಪಂಚಾಕ್ಷರಿ, ಅಜೀತ ಮಗದುಂ, ಪೈಜುಲ್ಲಾ ಇನಾಂದಾರ, ರುಸ್ತುಂ ನಿಪ್ಪಾನಿ, ಕುಮಾರ ಸರಿಕರ, ಕೇದಾರಿ ಪಾಟೀಲ, ಶಂಕರ ಕುಂಬಾರ, ಸಂಗಮೇಶ ಕಾಲತಿಪ್ಪಿ, ಪಿ.ಎಸ್. ಮಾಸ್ತಿ, ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿರಾದಾರಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.