ತೇರದಾಳ: ಪಟ್ಟಣದ ಜನತೆಯ ಬಹುದಿನ ಬೇಡಿಕೆಯಾಗಿದ್ದ ಸರ್ಕಾರಿ ಪ್ರೌಢಶಾಲೆಯ ಪ್ರಾರಂಭಕ್ಕೆ ಕ್ಷಣಗಣನೆ ನಡೆದಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೇಲಿಂದ ಮೇಲೆ ಹಿರಿಯರ ಸಭೆ ನಡೆಸಿದ್ದಾರೆ.
ಇದೇ ವರ್ಷದಿಂದ ನೂತನ ಪ್ರೌಢಶಾಲೆಯನ್ನು ಪ್ರಾರಂಭಿಸುವ ಕುರಿತು ಇಲಾಖೆ ಆದೇಶವನ್ನೂ ಮಾಡಿದೆ. ಪ್ರೌಢಶಾಲೆಯನ್ನು ಪ್ರಾರಂಭಿಸುವ ಸಲುವಾಗಿ ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಹಲವು ಬಾರಿ ನಗರದ ಮುಖಂಡರೊಂದಿಗೆ ಸಮಾಲೋಚಿಸಿ, ಸಭೆಗಳನ್ನು ಮಾಡಿದ್ದಾರೆ. ಅಲ್ಲದೆ ಶಿಕ್ಷಣ ಸಂಯೋಜಕರಾದ ಸಂಗಮೇಶ ವಿಜಯಪುರ, ಬಿ.ಎಂ. ಹಳೇಮನಿ, ಸಿಆರ್‌ಪಿಗಳಾದ ಅನಂತರಾಜು ಮುಧೋಳ, ಮಹೇಶ ಸೋರಗಾಂವಿ ಅನೇಕ ಬಾರಿ ಹಿರಿಯರಿಗೆ ಭೇಟಿ ಮಾಡಿದ್ದಾರೆ.
ಮುಖಂಡರಾದ ಪ್ರವೀಣ ನಾಡಗೌಡ, ಅಶೋಕ ಆಳಗೊಂಡ, ಗೌತಮ ರೋಡಕರ, ಸುರೇಶ ಕಬಾಡಗಿ, ನಿಂಗಪ್ಪ ಮಾಲಗಾಂವಿ, ಮಲ್ಲಪ್ಪ ಜಮಖಂಡಿ, ಅಪ್ಪು ಮಂಗಸೂಳಿ, ಭುಜಬಲಿ ಕೇಂಗಾಲಿ. ರಮೇಶ ಧರೆನ್ನವರ, ರಾಮಣ್ಣ ಹಿಡಕಲ್, ಮಲ್ಲಿನಾಥ ಬೋಳಗೊಂಡ, ರಾಜು ಹೊಸಮನಿ ಸೇರಿದಂತೆ ಪುರಸಭೆ ಸದಸ್ಯರು ಅನೇಕರು ಗಲ್ಲಿಗಲ್ಲಿ ಸಂಚರಿಸಿ ಪಾಲಕರ ಭೇಟಿ ಮಾಡಿ ವಿದ್ಯಾರ್ಥಿಗಳ ದಾಖಲಾತಿಗೆ ಅಧಿಕಾರಿಗಳೊಂದಿಗೆ ಪ್ರಯತ್ನಿಸುವ ಕಾರ್ಯ ಚುರುಕುಗೊಂಡಿದೆ.
ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಅಜೀತ್ ಮನ್ನಿಕೇರಿ ಅವರು ಪ್ರೌಢಶಾಲೆಯ ಪ್ರಾರಂಭದ ಪೂರ್ವ ತಯಾರಿ ಕುರಿತು ಪರಿಶೀಲಿಸಿ ವರದಿ ತರಲು ತಿಳಿಸಿದಂತೆ ವಿಷಯ ಪರಿವೀಕ್ಷಕರಾದ ಮೋಹನಕುಮಾರ ನ್ಯಾಮಗೌಡ ಅವರು ನಗರದ ಅಂಚೆ ಕಚೇರಿ ಎದುರಿಗಿನ ಸರ್ಕಾರಿ ಶಾಲೆಗಳ ಆವರಣದಲ್ಲಿರುವ ಮರಾಠಿ ಶಾಲೆಯ ಸ್ಥಳಕ್ಕೆ ಭೇಟಿ ನೀಡಿ, ಹೊಸ ಪ್ರೌಢಶಾಲೆಗೆ ಕೊಠಡಿಗಳ ಲಭ್ಯತೆ, ಆ ಕೊಠಡಿಗಳ ಸುಣ್ಣ-ಬಣ್ಣ, ಪೀಠೋಪಕರಣಗಳ ಲಭ್ಯತೆ, ವಿದ್ಯಾರ್ಥಿಗಳಿಗೆ ಬೆಂಚ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಲಭ್ಯತೆ ಕುರಿತು ಬುಧವಾರ ವಿವರವಾದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ವಿಷಯ ಪರಿವೀಕ್ಷಕ ಮೋಹನಕುಮಾರ ನ್ಯಾಮಗೌಡ ಮಾತನಾಡಿ, ವಿದ್ಯಾರ್ಥಿ ಗಳ ಸುರಕ್ಷತೆ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳ ಕುರಿತಾಗಿ ಪರಿಶೀಲನೆ ಮಾಡಿದ್ದು, ಕೊಠಡಿಗಳು, ಆಸನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಎಲ್ಲವೂ ಸರಿಯಾಗಿದೆ. ನಗರದ ಮುಖಂಡರ ಸಹಾಯದೊಂದಿಗೆ ಸಾಧ್ಯವಾದಷ್ಟು ಬೇಗನೆ ವಿದ್ಯಾರ್ಥಿಗಳ ಪ್ರವೇಶ ಪಡೆದು ಶಾಲೆಯ ಪ್ರಾರಂಭೋತ್ಸವಕ್ಕೆ ಮೇಲಧಿಕಾರಿಗಳ ಅನುಮತಿಯೊಂದಿಗೆ ಮುಂದುವರೆಯಬಹುದಾಗಿದೆ ಎಂದರು.
ಮುಖಂಡ ಅಶೋಕ ಆಳಗೊಂಡ, ಶಿಕ್ಷಣ ಸಂಯೋಜಕ ಬಿ.ಎಂ. ಹಳೆಮನಿ, ಸಿಆರ್ಪಿ ಅನಂತರಾಜು ಮುಧೋಳ, ಮುಖ್ಯಶಿಕ್ಷಕ ಕೆ.ಡಿ. ಮಾಲಗಾಂವಿ, ಎಸ್.ಬಿ. ಮೋಮಿನ್, ಪ್ರಕಾಶ ಮಸೂತಿ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.