ADVERTISEMENT

ಪೀಠಕ್ಕೆ ಗುರುವಿನ ಆಯ್ಕೆ ಭಕ್ತರಿಗೆ ಬಿಟ್ಟಿದ್ದು: ಬಸವರಾಜ ಪಟ್ಟದಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 6:49 IST
Last Updated 22 ಜೂನ್ 2021, 6:49 IST
ಪಟ್ಟಸಾಲಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಕಾಂತ ಶೇಖಾ ಅವರು ಮಾತನಾಡಿದರು
ಪಟ್ಟಸಾಲಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಕಾಂತ ಶೇಖಾ ಅವರು ಮಾತನಾಡಿದರು   

ಗುಳೇದಗುಡ್ಡ: ಇಲ್ಲಿನ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಮೂರನೇ ಪೀಠಾಧಿಪತಿಯ ಆಯ್ಕೆಯನ್ನು ಭಕ್ತರಿಗೆ ಬಿಡಲಾಗಿದೆ ಎಂದು ಹಾಲಿ ಶ್ರೀಗಳಾದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.

ಮಠದ ಸಭಾ ಭವನದಲ್ಲಿ ಇತ್ತೀಚೆಗೆ ಕರೆದ ಸಮಾಜದ ಪ್ರಮುಖರ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಈ ಪಟ್ಟಸಾಲಿ ಪೀಠಕ್ಕೆ ಭೌಗೋಳಿಕವಾಗಿ ಬಹುದೊಡ್ಡ ವ್ಯಾಪ್ತಿ ಇದೆ. ಅದಕ್ಕಾಗಿ ಬಹಳಷ್ಟು ವಿವೇಚನೆಯಿಂದ, ವಿಶಾಲ ಭಾವನೆಯಿಂದ ಯೋಗ್ಯವಾದ ಉತ್ತರಾಧಿಕಾರಿಯನ್ನು ಪೀಠಕ್ಕೆ ಗುರುವನ್ನಾಗಿ ಮಾಡಬೇಕು. ಭಕ್ತರ ಆಯ್ಕೆಯೇ ನಮ್ಮ ಆಯ್ಕೆ. ಇದರಲ್ಲಿ ನಮ್ಮ ಪಾತ್ರವೇನು ಇಲ್ಲ ಎಂದರು.

ADVERTISEMENT

ಈ ವೇಳೆ ಪಟ್ಟಸಾಲಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಚಂದ್ರಕಾಂತ ಶೇಖಾ ಮಾತನಾಡಿ, ಈಗಿನ ಸ್ವಾಮೀಜಿ ವಯೋವೃದ್ಧರಾದ ಕಾರಣ ಗುರು ಪರಂಪರೆಯನ್ನು ಮುಂದುವರೆಸುವ ಗುರುತರ ಜವಾಬ್ದಾರಿ ಸಮಾಜದ್ದಾಗಿದೆ. ಹಾಗಾಗಿ ಎಲ್ಲರೂ ಈ ಸಭೆಯಲ್ಲಿ ಉತ್ತರಾಧಿಕಾರಿ ಆಯ್ಕೆ ವಿಚಾರವಾಗಿ ಸೂಕ್ತ ಸಲಹೆ ಸೂಚನೆಗಳ ನೀಡಬೇಕು ಎಂದರು.

ಸಮಾಜದ ಪ್ರಮುಖರಾದ ಚಂದ್ರಶೇಖರ ತಿಪ್ಪಾಗೌಡ್ರ, ರವಿ ಗೌಡ್ರ, ಚಂದ್ರಕಾಂತ ಶೇಖಾ, ಈರಣ್ಣ ಅಲದಿ ಶಾಸ್ತ್ರೀಗಳು, ಸುರೇಖಾ
ತಿಪ್ಪಾ, ಸಂಗಪ್ಪ ನಾರಾ, ಪ್ರಕಾಶ ರೋಜಿ, ಶಂಕರ ಲಕ್ಕುಂಡಿ, ತಾರಾಮತಿ ರೋಜಿ, ಸಂಗಪ್ಪ ತಿಪ್ಪಾ
ಮತ್ತಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸಮಾಜದ ಹಿರಿಯರಾದ ಮಲ್ಲೇಶಪ್ಪ ಬೆಣ್ಣಿ, ಗುರುಸಿದ್ದೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ರಾಜು ಜವಳಿ, ಸಾಲೇಶ್ವರ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ತಾಂಡೂರ, ತವನಿಧಿ ದಾಸೋಹ ಸಮಿತಿ ಅಧ್ಯಕ್ಷ ಸಂಗನಬಸಪ್ಪ ಚಿಂದಿ, ಪಟ್ಟಸಾಲಿ ನೇಕಾರ ಸಮಾಜದ ಅಧ್ಯಕ್ಷ ಈರಣ್ಣ ಶೇಖಾ, ವಿವೇಕಾನಂದ ಪರಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.