ADVERTISEMENT

ಸಿದ್ಧಾಂಥ ಶಿಖಾಮಣಿಯಲ್ಲಿ ಸಮಸ್ಯೆಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 15:05 IST
Last Updated 29 ಆಗಸ್ಟ್ 2021, 15:05 IST
ಬೀದರ್‌ನ ನೌಬಾದ್‍ನ ನಿರಂಜಪ್ಪ ಹುಮನಾಬಾದೆ ಅವರ ಮನೆಯಲ್ಲಿ ಶ್ರಾವಣ ನಿಮಿತ್ತ ನಡೆದ ಶ್ರೀ ಸಿದ್ಧಾಂಥ ಶಿಖಾಮಣಿ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಡಾ. ರಾಜಶೇಖರ ಶಿವಾಚಾರ್ಯ ಅವರು ನಿರಂಜಪ್ಪ ಹುಮನಾಬಾದೆ ದಂಪತಿಗೆ ಶ್ರೀ ಸಿದ್ಧಾಂಥ ಶಿಖಾಮಣಿ ಗ್ರಂಥ ನೀಡಿದರು
ಬೀದರ್‌ನ ನೌಬಾದ್‍ನ ನಿರಂಜಪ್ಪ ಹುಮನಾಬಾದೆ ಅವರ ಮನೆಯಲ್ಲಿ ಶ್ರಾವಣ ನಿಮಿತ್ತ ನಡೆದ ಶ್ರೀ ಸಿದ್ಧಾಂಥ ಶಿಖಾಮಣಿ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಡಾ. ರಾಜಶೇಖರ ಶಿವಾಚಾರ್ಯ ಅವರು ನಿರಂಜಪ್ಪ ಹುಮನಾಬಾದೆ ದಂಪತಿಗೆ ಶ್ರೀ ಸಿದ್ಧಾಂಥ ಶಿಖಾಮಣಿ ಗ್ರಂಥ ನೀಡಿದರು   

ಬೀದರ್: 'ಅಪೂರ್ವ ಜೀವನ ಮೌಲ್ಯಗಳನ್ನು ಹೊಂದಿರುವ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ವಿಶ್ವದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ’ ಎಂದು ಬೇಮಳಖೇಡ ಹಿರೇಮಠ ಸಂಸ್ಥಾನದ ಡಾ. ರಾಜಶೇಖರ ಶಿವಾಚಾರ್ಯ ನುಡಿದರು.

ನಗರದ ನೌಬಾದ್‍ನ ನಿರಂಜಪ್ಪ ಹುಮನಾಬಾದ್ ಅವರ ಮನೆಯಲ್ಲಿ ಶ್ರಾವಣ ನಿಮಿತ್ತ ನಡೆದ ಶ್ರೀ ಸಿದ್ಧಾಂಥ ಶಿಖಾಮಣಿ ಜ್ಞಾನಯಜ್ಞ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವ್ಯಕ್ತಿ ಸುಸಂಸ್ಕೃತನಾದರೆ ಕುಟುಂಬ ಹಾಗೂ ಸಮಾಜ ಸುಧಾರಣೆಯಾಗುತ್ತದೆ ಎನ್ನುವ ಆಶಯದೊಂದಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಆಗಸ್ತ ಮಹರ್ಷಿಯನ್ನು ನಿಮಿತ್ತ ಮಾಡಿಕೊಂಡು ಲೋಕದ ಸಮಸ್ತ ಮಾನವರ ಕಲ್ಯಾಣಕ್ಕಾಗಿ ಶ್ರೇಷ್ಠ ಶಿವ ಸಿದ್ಧಾಂತ ಬೋಧಿಸಿದರು ಎಂದು ಹೇಳಿದರು.

ADVERTISEMENT

ಶ್ರೀ ಗ್ರಂಥ ಗೌರವ, ಪಂಚಾಚಾರ್ಯರ ಭಾವಚಿತ್ರ ಪೂಜೆ, ಶ್ರೀ ಗ್ರಂಥ ಪಾರಾಯಣ ನಡೆಯಿತು. ನಿರಂಜಪ್ಪ ಹುಮನಾಬಾದೆ ಸ್ವಾಗತಿಸಿದರು. ಪ್ರಭಾವತಿ ನಿರಂಜಪ್ಪ, ಸ್ವಾತಿ ವೀರೇಶ, ಸುಧಾ ಕಲ್ಯಾಣಪ್ಪ, ರಾಜಮತಿ, ಕುಶಾಲರಾವ್, ಮಹಾದೇವಿ ಭಂಗೂರೆ, ರೇಖಾ ವೀರಶೆಟ್ಟಿ ಭಂಗೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.