ADVERTISEMENT

ಕಾಯಕದಲ್ಲಿ ನಿರತರಾದವರೇ ನಿಜ ಶರಣರು

ಪುಣ್ಯ ಸ್ಮರಣೆ: ಗುರು ಮಹಾಂತ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 13:58 IST
Last Updated 18 ಜನವರಿ 2024, 13:58 IST
ಹುನಗುಂದ ಪಟ್ಟಣದ ಪರಸಭೆಯ ಮಂಗಲ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಳಕಲ್ ದ ಗುರುಮಹಾಂತ ಶ್ರೀ ಮಾತನಾಡಿದರು.
ಹುನಗುಂದ ಪಟ್ಟಣದ ಪರಸಭೆಯ ಮಂಗಲ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಳಕಲ್ ದ ಗುರುಮಹಾಂತ ಶ್ರೀ ಮಾತನಾಡಿದರು.   

ಹುನಗುಂದ: ‘ಕಾಯಕದಲ್ಲಿ ನಿರತರಾಗಿ ತನ್ನನ್ನೇ ತಾ ಅರಿತುಕೊಂಡು ಜೀವನದಲ್ಲಿ ಮುಕ್ತಿ ಪಡೆಯುವವರೇ ನಿಜ ಶರಣರು. ಅಂತಹ ಕಾಯಕ ಜೀವಿಗಳಾಗಿ ಆದರ್ಶ ದಾಂಪತ್ಯ ಜೀವನಕ್ಕೆ ಮಾದರಿಯಾದವರು ಲಿಂ.ಚೆನ್ನಮ್ಮ ನೀಲಕಂಠಪ್ಪ ಹಾದಿಮನಿ ದಂಪತಿ’ ಎಂದು ಇಳಕಲ್ಲದ ಗುರು ಮಹಾಂತ ಶ್ರೀ ಹೇಳಿದರು.

ಪಟ್ಟಣದ ಪುರಸಭೆಯ ಮಂಗಲ ಮಂಟಪದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ನಡೆದ ಲಿಂ.ಚೆನ್ನಮ್ಮ ನೀಲಕಂಠಪ್ಪ ಬಸವಪ್ಪ ಹಾದಿಮನಿ ಶರಣ ದಂಪತಿಯ 7ನೇ ಪುಣ್ಯ ಸ್ಮರಣೆ, ದತ್ತಿ ಉಪನ್ಯಾಸ, ಪುಸ್ತಕ ಲೋಕಾರ್ಪಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಶರಣರು ಹೇಳಿದಂತೆ ಕಾಯಕ ಮತ್ತು ಸಂಸಾರಗಳ ಸಾರ ತಿಳಿದು ಜೀವನ ನಡೆಸಿದಾಗಲೇ ಮುಕ್ತಿ ಕಾಣಲು ಸಾಧ್ಯ’ ಎಂದರು.

ADVERTISEMENT

ಶಿರೂರ ಮಹಾಂತ ತೀರ್ಥದ ಬಸವಲಿಂಗ ಶ್ರೀ ಮಾತನಾಡಿ, ‘12ನೇ ಶತಮಾನದ ಶರಣರ ಅನುಭಾವದ ನುಡಿಗಳೇ ವಚನಗಳು. ಜೀವನದ ಮೌಲ್ಯಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟ ಶರಣರು ನುಡಿದಂತೆ ನಡೆದು ಮುಕ್ತಿ ಪಥದ ದಾರಿ ತೋರಿದರು’ ಎಂದರು.

ಸಾಹಿತಿ ಸಿದ್ಧು ದಿವಾಣ ಮಾತನಾಡಿ, ‘ಬಸವಾದಿ ಶರಣರ ಬದುಕಿನ ಮೌಲ್ಯಗಳನ್ನು ಜನಪದ ತತ್ವವನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು’ ಎಂದರು.

ಪ್ರೊ. ಅಜಯ ಪುರಾಣಿಕ ಅವರು ಉಪನ್ಯಾಸ ನೀಡಿದರು. ಕವಯತ್ರಿ ಲಲಿತಾ ಹೊಸಪ್ಯಾಟಿ ಅವರ ‘ಬಗೆದಷ್ಟು ಬಗೆಗಳು’ ಮತ್ತು ಜಗದೀಶ ಹಾದಿಮನಿ ಅವರ ‘ಕೊನೆಯಿರದ ಬಾನು’ ನಾಟಕ ಕೃತಿಗಳನ್ನು ವಿ. ಎಂ ಹಾದಿಮನಿಯ ಲೋಕಾರ್ಪಣೆಗೊಳಿಸಿದರು.

ಲಿ.ನೀಲಕಂಠಪ್ಪ ಬಸವಪ್ಪ ಹಾದಿಮನಿ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಶಿಕ್ಷಕಿ ಕಸ್ತೂರಿ ಕೊನೆಸಾಗರ ಹಾಗೂ ಶಿಕ್ಷಕ ಅಶೋಕ ಬಳ್ಳಾ ಅವರಿಗೆ ಪ್ರದಾನ ಮಾಡಲಾಯಿತು.

ಬಗೆದಷ್ಟು ಬಗೆಗಳು ವಿಮರ್ಶಾ ಕೃತಿ ಕುರಿತು ಪ್ರೊ. ಸಂಗಣ್ಣ ಮುಡಪಲದಿನ್ನಿ, ಕೊನೆಯಿರದ ಬಾನು ಕುರಿತು ಪ್ರೊ.ಎಂ. ಡಿ ಚಿತ್ತರಗಿ ಅವಲೋಕನ ಮಾಡಿದರು.

ಶರಣ ಸಾಹಿತ್ಯ ಪರಿಷತದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಸ್. ಪಾವಟೆ, ಲಲಿತಾ ಹೊಸಪ್ಯಾಟಿ, ಜಗದೀಶ ಹಾದಿಮನಿ.ಎಸ್ ಎನ್ ಹಾದಿಮನಿ ಉಪಸ್ಥಿತರಿದ್ದರು.

ವಚನ ಪ್ರಾರ್ಥನೆಯನ್ನು ವಾಣಿ ಗಜೇಂದ್ರಗಡ, ವಿಜಯ ದಳವಾಯಿ, ಸುಮಂಗಲಾ ಪೂಜಾರಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.