
ಗುಳೇದಗುಡ್ಡ: ‘ದೇವರ ದಾಸಿಮಯ್ಯ, ಬಸವಣ್ಣನವರ ಆದರ್ಶಗಳು, ಅವರ ಮಾನವೀಯ ಮೌಲ್ಯಗಳು ನಮ್ಮಲ್ಲಿ ಗಟ್ಟಿಗೊಳ್ಳಲು ವಚನ ಸಾಹಿತ್ಯ ಅಧ್ಯಯನ ಮಾಡುವುದು ಅವಶ್ಯವಾಗಿದೆ’ ಎಂದು ಅನ್ನದಾನೇಶ್ವರ ಶಾಸ್ತ್ರೀಗಳು ಹೇಳಿದರು.
ಅವರು ಪಟ್ಟಣದ ಗುರುಸಿದ್ಧೇಶ್ವರ ಬೃಹನ್ಮಠದಲ್ಲಿ 40ನೇ ವರ್ಷದ ಶರಣ ಸಂಗಮ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಶರಣ ಸಂಸ್ಕೃತಿ ತತ್ವದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಾನವೀಯ ಮೌಲ್ಯಗಳು, ಉಪನಿಷತ್ತು ನಮ್ಮಲ್ಲಿ ಆದರ್ಶ ಸಂಸ್ಕಾರಗಳನ್ನು ಬೆಳೆಸುತ್ತವೆ. ಪುರಾಣ, ಪ್ರವಚನಗಳಲ್ಲಿ ಸಾಧು, ಸಂತರ, ಶರಣರ ತತ್ವ ಚಿಂತನೆಗಳನ್ನು ಆಲಿಸುವುದರಿಂದ ಮನುಷ್ಯನಲ್ಲಿ ಮನುಷ್ಯತ್ವವನ್ನು ಬೆಳೆಸುತ್ತವೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಗುರುಸಿದ್ಧ ಪಟ್ಟದಾರ್ಯ ಶ್ರೀ ಮಾತನಾಡಿ, ‘ಪುರಾಣ, ಪ್ರವಚನ ಆಲಿಸುವುದರಿಂದ ಮನುಷ್ಯನಲ್ಲಿ ಸದ್ಗುಣಗಳು ಬೆಳೆಯುತ್ತವೆ. ವಿಚಾರಗಳು ಚಿಂತನೆಗಳು ಆದರ್ಶಮಯವಾಗಿ ಧರ್ಮ ಸಂಸ್ಕೃತಿಯನ್ನು ನಮ್ಮಲ್ಲಿ ಮೂಡಿಸುತ್ತದೆ. ಭಾರತೀಯರಾದ ಪ್ರತಿಯೊಬ್ಬರು ಧರ್ಮ, ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ನಾವು ಕಲಿತು ಮಕ್ಕಳಿಗೂ ಕಲಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕಾಗಿದೆ’ ಎಂದರು.
ವಿಶ್ರಾಂತ ಪೀಠಾಧ್ಯಕ್ಷರಾದ ಬಸವರಾಜ ಪಟ್ಟದಾರ್ಯ ಶ್ರೀ, ದಾಸೋಹಿ ಮಲ್ಲಪ್ಪ ತಮ್ಮಣ್ಣೆಪ್ಪ ಅರುಟಗಿ, ಅಧ್ಯಕ್ಷ ಆನಂದ ತಿಪ್ಪಾ, ಸಿ.ಎಂ.ಚಿಂದಿ ಇದ್ದರು.
ಹಿರಿಯ ಕಲಾವಿದ ಶಂಕರ ಮುಂದಿನಮನಿ ಹಾಗೂ ಅವರ ತಂಡ ಸುಮಧುರ ಸಂಗೀತ ಕಾರ್ಯಕ್ರಮ ನಡೆಸಿ, ಕೇಳುಗರ ಮನತನಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.