ಕರ್ನಾಟಕ ಪ್ರದೇಶ ಕುರುಬರ ಸಂಘ ತೇರದಾಳ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಭಕ್ತ ಕನಕದಾಸ ಜಯಂತಿಯಲ್ಲಿ ಚಿನ್ಮಯಾನಂದ ಶ್ರೀ ಆಶೀರ್ವಚಿಸಿದರು.
ತೇರದಾಳ: ಸಮಾಜವು ಯುವಕರ ಭವಿಷ್ಯಕ್ಕೆ ಹಲವು ಕಟ್ಟುಪಾಟಡುಗಳನ್ನು ವಿಧಿಸುವಂತೆ ಅವರಿಂದ ಒಗ್ಗಟ್ಟನ್ನು ಬಯಸುತ್ತದೆ. ಅದು ಬೇರೆ ಸಮಾಜಗಳಿಗೆ ತೊಂದರೆಯಾಗದಂತಿರಬೇಕು ಎಂದು ಮುಗಳಖೋಡ-ಶಿರೂರ ಕನಕಬ್ರಹ್ಮ ಮಠದ ಚಿನ್ಮಯಾನಂದ ಶ್ರೀ ಹೇಳಿದರು.
ಕರ್ನಾಟಕ ಪ್ರದೇಶ ಕುರುಬ ಸಮಾಜದ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಹೆಚ್ಚು ಅಂಟಿಕೊಳ್ಳುತ್ತಿದ್ದಾರೆ. ಇದಕ್ಕೆ ಹಿರಿಯರು ಕಡಿವಾಣ ಹಾಕುವುದರ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಸಿದ್ದಾಪುರ, ಕುರುಬ ಸಮಾಜ ಇನ್ನೂ ಸಾಕಷ್ಟು ಸಂಘಟನೆಗೊಳ್ಳುವ ಅವಶ್ಯಕತೆ ಇದೆ. ಆ ದಿಸೆಯಲ್ಲಿ ಸಮಾಜ ಬಾಂಧವರು ಸಂಘಟನೆಗೆ ಆದ್ಯತೆ ನೀಡಬೇಕು. ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ಹೇಳಿದರು.
ಡಾ.ಡಿ.ಎನ್.ಸನದಿ, ಪಿಎಸ್ಐ ಅಪ್ಪು ಐಗಳಿ ಮಾತನಾಡಿದರು. ಜಮಖಂಡಿ ಬಿಎಲ್‌ಡಿಇ ಕಾಲೇಜಿನ ಉಪನ್ಯಾಸಕ ಮಹಾದೇವ ಪೂಜಾರಿ ವಿಶೇಷ ಉಪನ್ಯಾಸ ನೀಡಿದರು. ಹಂದಿಗುಂದ ಹಾಲಸಿದ್ದೇಶ್ವರ ಮಠದ ಶ್ರೀಮಂತ ಶಿವಯೋಗಿ ನೇತೃತ್ವ ವಹಿಸಿದ್ದರು. ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ರಾಮ ಕಾಗಿ ಅಧ್ಯಕ್ಷತೆ ವಹಿಸಿದ್ದರು.
ಪ್ರವೀಣ ನಾಡಗೌಡ, ರಂಗನೌಡ ಪಾಟೀಲ, ಲಕ್ಕಪ್ಪ ಬನಾಜನವರ, ಮಲಕಾರಿ ಗಾಡದವರ, ಮಹಾಲಿಂಗಪ್ಪ ಜಕ್ಕನ್ನವರ, ಮಲ್ಲಪ್ಪ ಸಿಂಗಾಡಿ, ದುಂಡಪ್ಪ ಕರಿಗಾರ, ಶೆಟ್ಟೆಪ್ಪ ಸುಣಗಾರ, ಡಾ.ಎಸ್.ಎಂ.ಕರಿಗಾರ, ಡಾ.ಕೆ.ವೈ.ಕೆಂಬಾಗಿ ಇದ್ದರು.
ಅಶೋಕ ಧರ್ಮಟ್ಟಿ, ಈರಣ್ಣ ಲಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಭವ್ಯ ಮೆರವಣಿಗೆ: ಇದಕ್ಕೂ ಮೊದಲು ಕಲ್ಲಟ್ಟಿ ಗಲ್ಲಿಯಿಂದ ಕನಕದಾಸರ ಭಾವಚಿತ್ರ, ಕುಂಭಮೇಳದ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಜರುಗಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಲವು ಡೊಳ್ಳು ಕಲಾವಿದರ ವಾದನ ಮೆರವಣಿಗೆಗೆ ಕಳೆ ಕಟ್ಟಿ ಭಂಡಾರದಲ್ಲಿ ಮಿಂದೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.