ADVERTISEMENT

ಬಾಗಲಕೋಟೆ: ​​​​​​​₹34.10 ಲಕ್ಷ ಮೌಲ್ಯದ ಗೋಡೆ ಗಡಿಯಾರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 14:01 IST
Last Updated 30 ಮಾರ್ಚ್ 2023, 14:01 IST
   

ಬಾಗಲಕೋಟೆ: ನಗರದ ಎಪಿಎಂಸಿ ಕ್ರಾಸ್ ಬಳಿ ಗುರುವಾರ ಬೆಳಗಿನ ಜಾವ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಂದಾಜು ₹34.10 ಲಕ್ಷ ಮೌಲ್ಯದ 8,100 ಗೋಡೆ ಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಗ್ಯಾಸ್ ಸಾಗಿಸುವ ಎರಡು ಲಾರಿಗಳಲ್ಲಿ ಇವುಗಳನ್ನು ಸಾಗಿಸಲಾಗುತ್ತಿತ್ತು. ಒಂದು ಲಾರಿಯಲ್ಲಿ 420, ಇನ್ನೊಂದು ಲಾರಿಯಲ್ಲಿ 390 ಬಾಕ್ಸ್ ಪತ್ತೆಯಾಗಿದ್ದು, ಪ್ರತಿ ಬಾಕ್ಸ್‌ನಲ್ಲಿ ಹತ್ತು ಗೋಡೆ ಗಡಿಯಾರಗಳಿವೆ. ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಡೆ ಗಡಿಯಾರಗಳಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ ಅವರ ಭಾವಚಿತ್ರವಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ, ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರಗಳಿಂದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದಾರೆ.

ADVERTISEMENT

ಲಾರಿ ಇಬ್ಬರು ಚಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇವು ಯಾರಿಗೆ ಸೇರಿದ್ದು, ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.