ADVERTISEMENT

ಅತಂತ್ರ ಸ್ಥಿತಿಯಲ್ಲಿ ಟೆಂಟ್ ಶಾಲೆ ಶಿಕ್ಷಕಿಯರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 4:30 IST
Last Updated 21 ಸೆಪ್ಟೆಂಬರ್ 2011, 4:30 IST

ಹೊಸಪೇಟೆ: ಟೆಂಟ್ ಇದೆ ಮಾನ್ಯತೆ ಇಲ್ಲ. ಇದ್ದು ಇಲ್ಲದಂಥ ಟೆಂಟ್ ಮತ್ತು ಬೋರ್ಡ್, ಹೇಳುವವರು ಕೇಳುವವರು ಯಾರೂ ಇ್ಲ್ಲಲ! ಇನ್ನೂ ಓದುತ್ತಿರುವ ಮಕ್ಕಳ ಭವಿಷ್ಯದ ಬಗ್ಗೆ ಯಾರಿಗೂ ಚಿಂತೆನೂ ಇಲ್ಲ. ಈ ಬಗ್ಗೆ ಚಿಂತನೆಯೂ ಇ್ಲ್ಲಲ.  `ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು~ ಎನ್ನುವ ನಾಣ್ನುಡಿ  ಟೆಂಟ್ ಶಾಲೆಗಳಿಗೆ ಬಂದೊದಗಿದೆ.  

ಬಳ್ಳಾರಿ ಜಿಲ್ಲೆಗೆ ಗಣಿ ಉದ್ಯೋಗ ಅರಸಿ ಬಂದ ತಾತ್ಕಾಲಿಕ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು 2006 ರಿಂದ ಸರ್ವಶಿಕ್ಷಣ ಅಭಿಯಾನದಲ್ಲಿ ಆರಂಭಿಸಿದ್ದ ಟೆಂಟ್ ಶಾಲೆಗಳನ್ನು ಸರ್ಕಾರ ಅಧಿಕೃತವಾಗಿ ಮುಚ್ಚಿದೆ. ಆದರೆ ಆರಂಭದಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಹಯೋಗ ನೀಡಿದ ಸಂಸ್ಥೆ (ಡಾನ್‌ಬಾಸ್ಕೋ) ಇನ್ನೂ ನಡೆಸುತ್ತಿದೆಯಾದರೂ, ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ ನಮ್ಮನ್ನು ಮಾತ್ರ ಅತಂತ್ರ ಮಾಡಿದ್ದಾರೆ, ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿ ನಮ್ಮ ಸಮಸ್ಯೆಗೆ ಮುಕ್ತಿ ಹೇಳಬೇಕು ಎಂಬುದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆಯುತ್ತಿರುವ ಟೆಂಟ್‌ಶಾಲೆಗಳ ಶಿಕ್ಷಕಿಯರ ಅರಿಕೆ.

ಹೌದು!ಬಳ್ಳಾರಿ ಜಿಲ್ಲೆಯ ಗಣಿ ಉದ್ಯಮ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆ ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದ್ದು ಸರಿಯಾದರೂ ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಅನುಷ್ಠಾನಕ್ಕೆ ತಂದ `ಸರ್ವಶಿಕ್ಷಣ ಅಭಿಯಾನ~ ಪರಸ್ಥಳಗಳಿಂದ ಬಂದು ತಾತ್ಕಾಲಿಕವಾಗಿ ವಾಸವಾಗಿರುವ ಮಕ್ಕಳು ಶಿಕ್ಷಣ ಪಡೆಯುವಂತೆ ಮಾಡಲು ಜಾರಿಗೆ ತಂದಿತ್ತು.

ಈಗಾಗಲೇ 7 ಟೆಂಟ್ ಶಾಲೆಗಳನ್ನು ಮುಚ್ಚಲಾಗಿದೆ. ಸದ್ಯ ಎರಡು ಶಾಲೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಅವು ಕಾಟಾಚಾರಕ್ಕೆ ಎನ್ನುವಂತಾಗಿದೆ.  ಪ್ರತಿ ಟೆಂಟ್‌ನಲ್ಲಿ 40 ರಂತೆ ಮಕ್ಕಳಿದ್ದಾರೆ. ಇನ್ನು ಈ ಟೆಂಟ್‌ಗಳೋ  ಮಳೆಗೆ ಸೋರುತ್ತವೆ. ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಸಲು ಅನುದಾನವೇ ಇಲ್ಲ. ಪ್ರತಿ ತಿಂಗಳು ನೀಡುತ್ತಿದ್ದ 1600 ವೇತನವು (ಸಂಭಾವನೆ) ಕಳೆದ ಆರು ತಿಂಗಳುಗಳಿಂದ ಇಲ್ಲ. `ಸರ್ಕಾರ ಹಣ ನೀಡುವುದ್ಲ್ಲಿಲ ಎಂದು ಹೇಳುತ್ತಿದೆ. ಆದರೆ ನಾವು ಕೊಡಸ್ತೀವೀ ಎಂದು ಡಾನ್‌ಬಾಸ್ಕೋ~ ಇವರಿಬ್ಬರ ಮಧ್ಯೆ ಏನು ನಡೀತಿದೆ  ಎಂಬುದು ತಿಳಿದಿಲ್ಲವಾದರೂ ನಮ್ಮ ಪರಿಸ್ಥಿತಿ ಮಾತ್ರ ಅತಂತ್ರವಾಗಿದೆ ಎಂದು ಶಿಕ್ಷಕಿ ಮೇರಿ ತಮ್ಮ ಸಹೋದ್ಯೋಗಿಗಳ ಪರವಾಗಿ ತನ್ನ ಅಳಲನ್ನು ತೋಡಿಕೊಂಡರು.

ಕಳೆದ ಮಾರ್ಚ್ ನಂತರ ಇಂತಹ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ `ಕೇವಲ ಒಂದು ಕಡೆ ಮಾತ್ರ ಯೋಜನೆ ಅನುಷ್ಠಾನದಲ್ಲಿದ್ದು ಅಲ್ಲಿಗೆ ಬೇಕಾದ ನಮ್ಮ ಪಾಲನ್ನು ನೀಡುತ್ತಿದ್ದೇವೆ~ ಎಂಬುದು ಶಿಕ್ಷಣ ಇಲಾಖೆಯ ಸ್ಪಷ್ಟ ನಿಲುವು. `ನಮಗೆ ಶಾಲೆ ನಿಲ್ಲಿಸುವಂತೆ ಯಾವುದೇ ಲಿಖಿತ ಹೇಳಿಕೆ ನೀಡಿಲ್ಲ~ಎಂಬುದು ಇವರ ವಾದ.

ಟೆಂಟ್ ಶಾಲೆಗಳು ಶಿಕ್ಷಕಿಯರಿಗೆ ಸಂಭಾವನೆಗಳನ್ನು ನೀಡದೆ ಕೆಲಸಮಾತ್ರ ಪಡೆಯುತ್ತಿದ್ದು `ಮಕ್ಕಳನ್ನು ಬಿಟ್ಟು ಹೋಗದ ಮತ್ತು ಸಂಭಾವನೆ ಇಲ್ಲದೆ ದುಡಿಯುವ ಅತಂತ್ರ ಸ್ಥಿತಿ ಶಿಕ್ಷಕಿಯರದ್ದು~. ತಾನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರೆ  ಹೊರ ಸಂಪನ್ಮೂಲಗಳಿಂದಾದರೂ ದಾನ ಪಡೆದು ಶಾಲೆ ನಡೆಸುತ್ತೇವೆ ಎಂಬುದು ಡೊನ್ ಬೋಸ್ಕೊ ಸಂಸ್ಥೆಯ ಪ್ರತಿವಾದ. 

ಒಟ್ಟಾರೆ ಇಬ್ಬರ ಜಗಳದಲ್ಲಿ ಶಿಕ್ಷಕಿಯರು ವಿದ್ಯಾರ್ಥಿಗಳು ಅಂತಂತ್ರವಾಗಿರುವುದಂತೂ ಸತ್ಯ. ಹಿರಿಯ ಅಧಿಕಾರಿಗಳು ಈ ಗೊಂದಲಕ್ಕೆ ಅಂತ್ಯ ಹಾಡಬೇಕು ಎಂಬುದು ಶಿಕ್ಷಕಿಯರ ಹಾಗೂ ಮಕ್ಕಳ ಪಾಲಕರ ಅನಿಸಿಕೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.