ADVERTISEMENT

ಅಧಿಕಾರಿಗಳ ಗೈರು: ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 4:50 IST
Last Updated 2 ಜುಲೈ 2012, 4:50 IST
ಅಧಿಕಾರಿಗಳ ಗೈರು: ಸದಸ್ಯರ ಆಕ್ರೋಶ
ಅಧಿಕಾರಿಗಳ ಗೈರು: ಸದಸ್ಯರ ಆಕ್ರೋಶ   

ಹಗರಿಬೊಮ್ಮನಹಳ್ಳಿ : ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಸಹಿತ ಲೋಕೋಪ ಯೋಗಿ, ಸಾರಿಗೆ, ಸಣ್ಣ ನೀರಾವರಿ, ಗ್ರಾಮೀಣ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ಅಧಿಕಾರಿ ಗಳು ಶನಿವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದಕ್ಕೆ ತಾ.ಪಂ ಸಭಾಂಗಣ ಸಾಕ್ಷಿಯಾಯಿತು.

ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ತಡೆ ಹಿಡಿದಿರುವ ಕುರಿತು, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಚಿಲವಾರ ಬಂಡಿ ಏತ ನೀರಾವರಿ ಯೋಜನೆಯ ಸಮಗ್ರ ಮಾಹಿತಿ, ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಪಟ್ಟಿ, ಗದ್ದಿಕೇರಿಯಿಂದ ಮೋರಿಗೇರಿ ಮಾರ್ಗವಾಗಿ ಇಟ್ಟಗಿಗೆ ಬಸ್ ಓಡಿಸುವ ಮತ್ತು ಮೋರಿಗೇರಿ-ಹೊಳಗುಂದಿ ರಸ್ತೆ ಯಲ್ಲಿ ನಿರ್ಮಿಸಬೇಕಾಗಿರುವ ಮೂರು ಸೇತುವೆಗಳ ಬಗ್ಗೆ ಉಪಾಧ್ಯಕ್ಷೆ ಭಾರತಿ ಶಿವಕುಮಾರ್ ಬೆಲ್ಲದ್ ಅವರ ಸಂದೇಹ ಗಳಿಗೆ ಉತ್ತರಿಸಬೇಕಾಗಿದ್ದ ಅಧಿಕಾರಿಗಳು ಗೈರು ಹಾಜರಾಗಿದ್ದರು.

ಸಾಮಾನ್ಯ ಸಭೆಯಲ್ಲಿ ಗೈರು ಹಾಜ ರಾಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಕಾರ್ಯ ನಿರ್ವಾಹಕ ಅಧಿಕಾರಿ ಜೆ. ಗೋಪ್ಯಾನಾಯ್ಕ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೂ.10.86 ಕೋಟಿ ಮೊತ್ತದ ಕ್ರಿಯಾಯೋಜನೆ ಜಿ.ಪಂ.ಗೆ ಸಲ್ಲಿಸಲಾಗಿತ್ತು. ಆದರೆ, ಕೇವಲ ರೂ. 4.53ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ ಎಂದರು.

ವಿದ್ಯುತ್ ಕಂಬಗಳನ್ನು ಅಳವಡಿಸುವ ಕುರಿತಂತೆ ತೀವ್ರ ಚರ್ಚೆ ನಡೆಯಿತು.  ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಆಹಾರದ ತೂಕ ಸರಿ ಇರುವುದಿಲ್ಲ. ಸಣ್ಣ ಮಕ್ಕಳಿಗೆ ಕೂಡ ಮೋಸ ಮಾಡುತ್ತೀರಿ ಎಂದು ಅಧಿಕಾರಿ ಸೋಮಣ್ಣ ಚಿನ್ನೂರು ವಿರುದ್ಧ ಹರಿಹಾಯ್ದರು.

ಚಿಲಗೋಡು ಆಶ್ರಯ ಕಾಲೋನಿಯ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಜಿ.ಪಂ. ಎಇಇ ಶಿವಲಿಂಗಯ್ಯ ಮಾತ ನಾಡಿ, ಜಿಲ್ಲಾಡಳಿತ ಮತ್ತು ಜಿ.ಪಂ.ವಿಭಾ ಗದಿಂದ ಒಟ್ಟು 45 ಕುಡಿಯುವ ನೀರಿನ ಯೋಜನೆಗಳಿಗೆ ಅನುಮೋದನೆ ದೊರೆ ತಿದ್ದು 42 ಯೋಜನೆಗಳು ಪೂರ್ಣ ಗೊಂಡಿವೆ ಎಂದರು. ಚಿಂತ್ರಪಳ್ಳಿ ಮತ್ತು ಹಗರಿಬೊಮ್ಮನ ಹಳ್ಳಿ ಗ್ರಾ.ಪಂ.ವ್ಯಾಪ್ತಿ ಯಲ್ಲಿ ಕುಡಿಯುವ ನೀರು ಪೂರೈಸುವ 36 ಕೊಳವೆ ಬಾವಿಗಳಿವೆ. ಅವೆಲ್ಲವು ಗಳನ್ನು ಸುಸ್ಥಿತಿಯಲ್ಲಿಟ್ಟರೆ ಕುಡಿಯು ನೀರಿಗೆ ಬರವಿ ರುವುದಿಲ್ಲ. ಅಧಿಕಾರಿಗಳು ಅಸಡ್ಡೆ ಮಾಡಿದರೆ ಮಾತ್ರ ನೀರಿನ ತಾಪತ್ರಯ ಉಂಟಾಗುತ್ತದೆ ಎಂದು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಉಪ್ಪಾರ ಬಾಲು ತಿಳಿಸಿದರು.

ಸಭೆಯ ಕೊನೆಯಲ್ಲಿ ತಾ.ಪಂ. ರೂ.1 ಕೋಟಿ ಅನುದಾನವನ್ನು ಎಲ್ಲ ಸದಸ್ಯರಿ ಗೂ ಸಮವಾಗಿ ಹಂಚುವ ಕುರಿತಂತೆ ಅಧ್ಯಕ್ಷೆ ಮತ್ತು ಚಂದ್ರಪ್ಪನವರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸದಸ್ಯೆ ಕುರುಬರ ಲೋಹಿತ ನನ್ನ ವ್ಯಾಪ್ತಿ ಯಲ್ಲಿ 12 ಗ್ರಾಮಗಳಿವೆ. ಮಹಿಳಾ ಶೌಚಾಲಯ ನಿರ್ಮಿಸುವ ನಿಟ್ಟಿನಲ್ಲಿ ಅನುದಾನ ಒದಗಿಸುವಂತೆ ಪಟ್ಟು ಹಿಡಿ ದರು. ಈ ಸಂದರ್ಭದಲ್ಲಿ ಬೇಸತ್ತ ಅಧ್ಯಕ್ಷೆ ಗಂಗಮ್ಮ ಸಭೆಯಿಂದ ಹೊರ ನಡೆದರು. ಗೋಪ್ಯಾ ನಾಯ್ಕ ಅಧ್ಯಕ್ಷರ ಮನ ಒಲಿಸಿ ಸಭೆಗೆ ಕರೆತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.