ADVERTISEMENT

  ‘ಆರೋಗ್ಯ ಇಲಾಖೆ ಯೋಜನೆ ಜನರಿಗೆ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 8:46 IST
Last Updated 27 ಡಿಸೆಂಬರ್ 2017, 8:46 IST

ಬಳ್ಳಾರಿ: ‘ ಆರೋಗ್ಯ ಇಲಾಖೆಯ ಯೋಜನೆಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಎಂದು ರೂಪನಗುಡಿಯ ವೈದ್ಯಾಧಿಕಾರಿ ಡಾ.ಅಂಬದಾಸ್ ಹೇಳಿದರು.

ತಾಲ್ಲೂಕಿನ ರೂಪನಗುಡಿಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಜಾನಪದ ಕಲಾ ತಂಡಗಳ ಮೂಲಕ ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ ಸೊಳ್ಳೆಗಳಿಂದ ಮತ್ತು ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿವಹಿಸುವುದು ಅವಶ್ಯಕ. ಅಲ್ಲದೇ, ತಾಯಿ ಮತ್ತು ಶಿಶು ಮರಣ ಪ್ರಮಾಣ ಕಡಿಮೆಗೊಳಿಸಲು ಶೌಚಾಲಯ ನಿರ್ಮಾಣ ಮಾಡಿಕೊಳ್ಳವುದಕ್ಕೆ ಎಲ್ಲರೂ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪ ಅವರು ಮಾತನಾಡಿ, ‘ಜಿಲ್ಲೆಯ ಏಳು ತಾಲ್ಲೂಕಿನ 70 ಗ್ರಾಮಗಳಲ್ಲಿ 4 ಕಲಾ ತಂಡದ ಸದಸ್ಯರು ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಾರೆ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದಣ್ಣ, ಸಿಬ್ಬಂದಿಯವರಾದ ವೀರಾರೆಡ್ಡಿ, ಮಾನಪ್ಪ, ಮುತ್ತನಗೌಡ, ಸೈಯದ್ ವಹಾಬ್, ಅನಿಲ್, ಶಿಕ್ಷಕರಾದ ರುಕ್ಸಾನಾ, ಸ್ನೇಹ, ರಮೇಶ್, ಬಸವರಾಜ್ ಉಪಸ್ಥಿತರಿದ್ದರು. ನಂತರ ಬೀದಿ ನಾಟಕದ ಮೂಲಕ ವಿವಿಧ ಆರೋಗ್ಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.