ADVERTISEMENT

ಎಮ್ಮಿಗನೂರಿನಲ್ಲಿ ಸರಣಿಗಳ್ಳತನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 9:25 IST
Last Updated 12 ಏಪ್ರಿಲ್ 2011, 9:25 IST

ಕುರುಗೋಡು: ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಎಮ್ಮಿಗನೂರು ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಾಲ್ಕು ಮನೆಗಳ ಸರಣಿ ಕಳ್ಳತನ ನಡೆದಿದ್ದು, ಅಂದಾಜು 3.5 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಹಾಗೂ ನಗದು ದೋಚಿದ್ದಾರೆ. ಮನೆಗಳಲ್ಲಿ ಯಾರು ಇಲ್ಲದಾಗ ಈ ಮನೆಗಳಿಗೆ ನುಗ್ಗಿ ನಗ-ನಾಣ್ಯ ದೋಚಿ ಪರಾರಿಯಾಗಿದ್ದಾರೆ.

ಗ್ರಾಮದ ಬಸವನಪೇಟೆಯಲ್ಲಿರುವ ಟಿ.ಎಂ. ದೊಡ್ಡಬಸಯ್ಯಸ್ವಾಮಿ ಮನೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ 45 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ದೋಚಿದ್ದಾರೆ.

6ನೇ ವಾರ್ಡ್‌ನಲ್ಲಿರುವ ಮಿಠಾಯಿ ವ್ಯಾಪಾರಿ ನಾಗಲಿಕರ ಬಸವಲಿಂಗಪ್ಪ ಮನೆಯಲ್ಲಿ 25 ಗ್ರಾಂ ಚಿನ್ನ 80 ಸಾವಿರ ನಗದು ಅಪಹರಿಸಿದ್ದಾರೆ.

ADVERTISEMENT

ಹಡಪದ ಗುರುಪಾದಪ್ಪನ ಮನೆಯಲ್ಲಿ ರೂ. 1000 ಮತ್ತು ಶಿವಕುಮಾರ್‌ನ ಮನೆಯಲ್ಲಿ ಕಳ್ಳತನ ಪ್ರಯತ್ನ ನಡೆದಿದೆ. ಒಟ್ಟು 3.5ಲಕ್ಷಕ್ಕು ಅಧಿಕ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ.

ಕಳೆದ ನಾಲ್ಕು ತಿಂಗಳು ಹಿಂದೆ ಇದೇ ಮಾದರಿಯಲ್ಲಿ ಸರಣಿ ಮನೆಕಳ್ಳತನ ನಡೆದಿದ್ದು, ಈಗ ಮತ್ತೆ ಕಳ್ಳತನ ನಡೆದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕುರುಗೋಡು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.