ADVERTISEMENT

ಕಂಪ್ಲಿ: ಅಂಬೇಡ್ಕರ್, ಬಾಬೂಜಿ ಜನ್ಮ ದಿನಾಚರಣೆ 14ಕ್ಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 5:45 IST
Last Updated 11 ಏಪ್ರಿಲ್ 2012, 5:45 IST

ಕಂಪ್ಲಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಮ್ ಅವರ ಜನ್ಮ ದಿನಾಚರಣೆಯನ್ನು ಇದೇ 14ರಂದು ಪಟ್ಟಣದಲ್ಲಿ ಅದ್ದೂರಿಯಿಂದ ಆಚರಿಸಲು ಮಂಗಳವಾರ ಪುರಸಭೆ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಜನ್ಮ ದಿನಾಚಾರಣೆ ಅಂಗವಾಗಿ ಪುರಸಭೆ ಆಡಳಿತ ಮಂಡಳಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆ ಪದಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿ ರಚಿಸಿ ಜವಾಬ್ದಾರಿ ವಹಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರ ಬಾಬೂಜೀ ಹೆಸರಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಪಟ್ಟಣದಲ್ಲಿ ಶಾಶ್ವತ ಕೆಲಸಗಳನ್ನು ಹಮ್ಮಿಕೊಂಡು ಮಾದರಿಯಾಗುವಂತೆ ಪುರಸಭೆ ವಿಪಕ್ಷ ಸದಸ್ಯ ಕೆ.ಎಂ. ಹೇಮಯ್ಯಸ್ವಾಮಿ ಮನವಿ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಪಿ. ಬ್ರಹ್ಮಯ್ಯ, ಸದಸ್ಯ ಎಂ.ಸಿ. ಮಾಯಾಪ್ಪ, ಜಿ.ಜಿ. ಚಂದ್ರಣ್ಣ, ವಿ. ವಿದ್ಯಾಧರ, ಎಂ. ರಾಜೇಂದ್ರಕುಮಾರಸ್ವಾಮಿ, ಅಖಿಲ ಕರ್ನಾಟಕ ಮಾದಾರ ಚೆನ್ನಯ್ಯ ಸಂಘದ ಹೋಬಳಿ ಘಟಕ ಅಧ್ಯಕ್ಷ ಜಿ. ರಾಮಣ್ಣ, ಜಿ. ತಿಮ್ಮಪ್ಪ, ಎಸ್. ಯರ‌್ರಿಸ್ವಾಮಿ, ಎನ್. ಶಿವಪ್ಪನಾಯಕ, ಕೆ. ಮೆಹಬೂಬ್, ಆರ್.ಎಚ್. ರುದ್ರಪ್ಪ ಜಯಂತಿ ಆಚರಣೆ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ರಾಮಾಂಜಿನೇಯಲು ಸಭೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ವಿ. ರಮೇಶ, ವ್ಯವಸ್ಥಾಪಕ ಎಚ್.ಎನ್. ಗುರುಪ್ರಸಾದ್, ಪುರಸಭೆ ಸದಸ್ಯ ಸಣ್ಣ ಹುಲುಗಪ್ಪ, ಯು. ರೇಣುಕಮ್ಮ, ಬಾವಿಕಟ್ಟೆ ಅಂಬಮ್ಮ, ನಾಮ ನಿರ್ದೇಶನ ಸದಸ್ಯರಾದ ಗೆಜ್ಜೆಳ್ಳಿ ಬಾಷಾ, ವಿ. ಶಂಕ್ರಮ್ಮ, ಮುಖಂಡರಾದ ಪಿ.ಎಸ್. ಬಸಪ್ಪ, ಹೊನ್ನೂರಪ್ಪ, ಸಿ. ಹುಸೇನಪ್ಪ, ವಿ. ಖೇಮಪ್ಪ, ವೀರಾಂಜನೇಯ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.