ADVERTISEMENT

ಕಮತೂರು: ಪ್ಲಾಸ್ಟಿಕ್ ತಿಂದು 4 ಜಾನುವಾರು ಸಾವು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 5:33 IST
Last Updated 24 ಏಪ್ರಿಲ್ 2013, 5:33 IST

ಸಂಡೂರು: ಸಂಡೂರು ತಾಲ್ಲೂಕಿನ ಕಮತೂರು ಗ್ರಾಮದಲ್ಲಿ ಮಂಗಳವಾರ ನಾಲ್ಕು ಜಾನುವಾರುಗಳು ಪ್ಲಾಸ್ಟಿಕ್ ತಿಂದು ಹೊಟ್ಟೆ ಉಬ್ಬಿ, ಸತ್ತಿರುವ ಘಟನೆ ನಡೆದಿದೆ.

ಕಮತೂರು ಗ್ರಾಮದ ನಿಂಗಾರೆಡ್ಡಿ ಯವರ ಒಂದು ಎಮ್ಮೆ, ಲಕ್ಷ್ಮಣನವರ ಒಂದು ಆಕಳು, ತಿಪ್ಪಯ್ಯನವರ ಒಂದು ಆಕಳು ಹಾಗೂ ಮಲ್ಲೇಶಿಯವರ ಒಂದು ಎತ್ತು ಮೃತಪಟ್ಟಿವೆ. ಗ್ರಾಮ ಸ್ಥರು ಪಶುವೈದ್ಯರನ್ನು ಕರೆಸಿದರು. ಹಿರಿಯ ಪಶುವೈದ್ಯ ಪರೀಕ್ಷಕ ಡಾ.ಜಗನ್ನಾಥ ಪರೀಕ್ಷಿಸಿದಾಗ ಜಾನುವಾರುಗಳ ಹೊಟ್ಟೆಯಲ್ಲಿ ಶೇ 80ರಷ್ಟು ಪ್ಲಾಸ್ಟಿಕ್ ತುಂಬಿರುವುದು ಕಂಡುಬಂದಿದೆ. ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ಸಹ ಇದನ್ನೇ ದೃಢೀಕರಿಸಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯ ಮಲ್ಲೇಶ ಮಾತನಾಡಿ, ಗ್ರಾಮದಲ್ಲಿ ಮೇವಿಲ್ಲದಿ ರುವುದರಿಂದ, ಪ್ಲಾಸ್ಟಿಕ್ ಚೀಲಗಳಲ್ಲಿ ಬಿಸಾಡಿದ ವಸ್ತುಗಳನ್ನು ತಿನ್ನಲು ಹೋಗಿ, ಪ್ಲಾಸ್ಟಿಕ್ ತಿಂದು ಜಾನುವಾರು ಗಳು ಸಾಯುತ್ತಿವೆ. ಕಳೆದ ವಾರ ಎರಡು ಜಾನುವಾರುಗಳು ಸತ್ತಿದ್ದವು. ಆದರೆ ಇಂದು ಪುನಃ ನಾಲ್ಕು ಜಾನುವಾರುಗಳು ಸತ್ತಿದ್ದರಿಂದ, ನಾವು ಈ ವಿಷಯವನ್ನು ಪಶು ವೈದ್ಯರ ಗಮನಕ್ಕೆ ತಂದದ್ದಾಗಿ ತಿಳಿಸಿದರು.

ನೀರು ಹಾಗೂ ಮೇವಿನ ಕೊರತೆಯಿಂದ ಜಾನುವಾರುಗಳು ಪ್ಲಾಸ್ಟಿಕ್ ತಿಂದು ಸಾಯುತ್ತಿರುವುದು ಪಶು ಪಾಲಕರನ್ನು ಚಿಂತೆಗೀಡು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.