ಕಾನಾಹೊಸಹಳ್ಳಿ(ಕೂಡ್ಲಿಗಿ): ಸ್ಥಳೀಯ ಗ್ರಾಮದೇವತೆ ಶ್ರಿ ಶಕ್ತಿ ಮಾರಿಕಾಂಬಾ ಜಾತ್ರಾ ಮಹೋತ್ಸವವು ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿತು.
ದೇವತೆಯನ್ನು ಪ್ರತಿಷ್ಠಾಪಿಸಲಾದ ಚೌತಿ ಗುಡಿಯ ಮುಂಭಾಗದಲ್ಲಿ ಪೋತರಾಜರ ನೃತ್ಯ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ರಾತ್ರಿ 11 ಗಂಟೆಗೆ ನೂತನವಾಗಿ ನಿರ್ಮಿಸಿ ರುವ ರಥವನ್ನು ಹೂವಿನ ಹಾರ, ಬಾವುಟಗಳಿಂದ ಸಿಂಗರಿಸಲಾಯಿತು.
ವಿವಿಧ ವರ್ಣದ ಬಟ್ಟೆಗಳಿಂದ ಅಲಂಕೃತವಾದ ರಥದಲ್ಲಿ ಮಾರಿಕಾಂಬಾ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ, ಡೊಳ್ಳು, ತಮಟೆ, ಉರುಮೆ, ನಂದಿಕೋಲು, ಮುಂತಾದ ಜಾನಪದ ವಾದ್ಯಗಳಿಂದ ಪಾದಗಟ್ಟೆಯವರೆಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ರಥೋತ್ಸವ ನೆರವೇರಿತು. ರಥಕ್ಕೆ ಭಕ್ತರು ಬಾಳೆಹಣ್ಣು, ಉತ್ತುತ್ತಿ ಎಸೆಯುವ ಮೂಲಕ ಹರಕೆ ತೀರಿಸಿದರು.
ಗ್ರಾಮದೇವತೆ ಮಾರಿಕಾಂಬಾ ದೇವಿಯು ಈ ಭಾಗದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು, ನೆರೆಯ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ, ಪೌಳಿ ಹಾಕುವ ಮೂಲಕ ತಮ್ಮ ಭಕ್ತಿಯ ಹರಕೆಯನ್ನು ಪೂರೈಸಿದರು.
ಜಾತ್ರೆಯಲ್ಲಿ ವಿಶೇಷವಾಗಿ ಗುರುವಾರ ರಾತ್ರಿ ಬಿಡುವ ಬಾಣ ಬಿರುಸುಗಳ ಚಿತ್ತಾಕರ್ಷಣೆ ಬಾನಂಗಳ ದಲ್ಲಿ ರಂಗು ರಂಗಿನ ಚಿತ್ತಾರ ಮೂಡಿಸಿ ಭಕ್ತ ಸಮೂಹವನ್ನು ಬೆರಗುಗೊಳಿಸಿತು. ಶುಕ್ರವಾರ ಬೆಳಗಿನ ಜಾವಕ್ಕೆ ದೇವಿ ಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ವಾದ್ಯಗಳ ಮೂಲಕ ಮೆರವಣಿಗೆಯ್ಲ್ಲಲಿ ಕೊಂಡೊಯ್ದು ಮೂಲ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸ ಲಾಯಿತು. ಗ್ರಾ.ಪಂ ವತಿಯಿಂದ ಭಕ್ತಾದಿ ಗಳಿಗೆ ಅಲ್ಲಲ್ಲಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.