ADVERTISEMENT

ಕುರಿಗಳಿಗೆ ರೋಗ ನಿರೋಧಕ ಲಸಿಕೆ ಹಾಕಿಸಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 6:40 IST
Last Updated 9 ಜೂನ್ 2011, 6:40 IST

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮುತ್ಕುರು-ಬೆನಕಾಪುರ ಕಾಲೋನಿ ಯಲ್ಲಿ ಮಂಗಳವಾರ ಕುರಿ ಮತ್ತು ಮೇಕೆಗಳಿಗೆ ರೋಗ ಬಾರದಂತೆ ತಡೆ ಯುವ ನಿಟ್ಟಿನಲ್ಲಿ ಪಶು ಸಂಗೋಪನಾ ಇಲಾಖೆಯ ವತಿಯಿಂದ ಎನ್‌ಸಿಪಿ ಯೋಜನೆಯಡಿ ಪಿಡಿಆರ್ ಲಸಿಕೆ ಹಾಕುವ ಕಾರ್ಯಕ್ರಮ ಆಯೋಜಿಸ ಲಾಗಿತ್ತು.

ತಾ.ಪಂ.ಅಧ್ಯಕ್ಷೆ ಪವಾಡಿ ಗಂಗಮ್ಮ ಹನಮಂತಪ್ಪ ಮೇಕೆಯ ಮರಿ ಯೊಂದಕ್ಕೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ. ಬೊಮ್ಮಯ್ಯ ಮಾತನಾಡಿ, ರೈತರು ಕುರಿ ಹಾಗೂ ಮೇಕೆಗಳಿಗೆ ರೋಗ ಕಂಡುಬಂದಲ್ಲಿ ಕೂಡಲೆ ಪಶು ವೈದ್ಯರನ್ನು ಸಂಪರ್ಕಿಸುವ ವೈಜ್ಞಾನಿಕ ಮನೋಭಾವ ಹೊಂದಿಲ್ಲ. ಗ್ರಾಮ ದಿಂದ ದೂರವಿರುವ ವೃಕ್ಷಗಳ ರೆಂಬೆಗಳಿಗೆ ರೋಗ ಪೀಡಿತ ಕುರಿ ಮರಿಗಳನ್ನು ಕಟ್ಟಿದರೆ ರೋಗದಿಂದ ವಿಮುಕ್ತರಾಗಬಹುದೆಂಬ ಮೌಢ್ಯ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕಾಣಬಹುದು ಎಂದು ವಿಷಾದಿಸಿದರು.

ರೋಗ ಬಾರದಂತೆ ತಡೆಯುವ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ಆಯಾ ಗ್ರಾ.ಪಂ. ಕಚೇರಿ ವ್ಯಾಪ್ತಿಯಲ್ಲಿ ನಿರಂತರ ಒಂದು ತಿಂಗಳ ಕಾಲ ಕುರಿ ಹಾಗು ಮೇಕೆಗಳಿಗೆ ಲಸಿಕೆ ಹಾಕಲಾಗು ತ್ತದೆ. ತಾಲ್ಲೂಕಿನ 1,24,123 ಕುರಿ ಗಳಿಗೆ ಲಸಿಕೆ ಹಾಕುವ ಗುರಿ ಹೊಂದ ಲಾಗಿದೆ. ರೈತ ಬಾಂಧವರು ಯೋಜ ನೆಯ ಸದುಪಯೋಗ ಪಡೆಯಬೇಕು ಎಂದು ಕೋರಿದರು.

ತಾ.ಪಂ. ಉಪಾಧ್ಯಕ್ಷೆ ಭಾರತಿ ಬೆಲ್ಲದ್, ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಗೋಪ್ಯಾನಾಯ್ಕ, ಸದಸ್ಯೆ ಕುರುಬರ ನಾಗರತ್ನಮ್ಮ, ಹಗರಿ ಬೊಮ್ಮನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂಜಾರ್ ಮಲ್ಲಮ್ಮ ಮತ್ತು ಉಪಾಧ್ಯಕ್ಷ ಸೋಮಶೇಖರಗೌಡ ಪಾಟೀಲ್ ಹಾಜರಿದ್ದರು. ಡಾ.ಕೆ.ಬಸವ ರಾಜ್, ಡಾ.ಕೆ.ಪ್ರಕಾಶ್‌ಗೌಡ್ ಮತ್ತು ಡಾ.ಸೂರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.