ADVERTISEMENT

ಕುರುಗೋಡು ಸುತ್ತಮುತ್ತ ಗಣೇಶ್ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 5:35 IST
Last Updated 22 ಏಪ್ರಿಲ್ 2013, 5:35 IST

ಕುರುಗೋಡು: ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜೆ.ಎನ್. ಗಣೇಶ್ ಪಟ್ಟಣದಲ್ಲಿ ಭಾನುವಾರ ಪ್ರಚಾರ ಪ್ರಾರಂಭಿಸಿದರು.

ಪಟ್ಟಣದ ಉಜ್ಜಳಪೇಟೆ, ಕೆಳಗಳಪೇಟೆ, ನೀಲಮ್ಮನ ಮಠ, ನಾಯಕರ ಓಣಿ, ಗೌಡರ ಓಣಿಯಲ್ಲಿ ಪ್ರಚಾರ ನಡೆಸಿದ ಅವರು ತಮ್ಮ `ಗಾಳಿ ಪಟ'ದ ಚಿಹ್ನೆಗೆ ಮತ ನೀಡಿ ಸೇವೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು.

ಪಟ್ಟಣದ ಪ್ರಮುಖ ಮುಖಂಡರ ಮನೆಗಳಿಗೆ ತೆರಳಿ ಸೇವಾಮನೋಭಾವ ಹೊಂದಿನ ನನ್ನನ್ನು ಬೆಂಬಲಿಸುವಂತೆ ಕೋರಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಚುನಾ ವಣೆಯ ಸ್ಪರ್ಧಿಸುವ ಅನಿವಾರ್ಯತೆ ನನಗಿರಲಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿರುವ ನನ್ನ ಅಭಿಮಾನಿಗಳ ಒತ್ತಡಕ್ಕೆ ಮಣಿದು ಕಣದಲ್ಲಿ ಉಳಿದಿದ್ದೇನೆ.

ಕಂಪ್ಲಿ, ಕುರುಗೋಡು ಮತ್ತು ಕೋಳೂರು ಹೋಬಳಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ನನ್ನ ಸಮಾಜ ಸೇವೆಗೆ ಮನಸೋತ ನೂರಾರು ಯುವಕರು ನನ್ನನ್ನು ಬೆಂಬಲಿಸಲು ಮುಂದೆ ಬಂದಿದ್ದಾರೆ ಎಂದರು.

ಡಾ.ವೀರೇಂದ್ರರೆಡ್ಡಿ, ಕೇಶವರೆಡ್ಡಿ, ರಾಮಾನಾಯ್ಡು, ನೆಲ್ಲುಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕರಿಬಸವನಗೌಡ, ಎಮ್ಮಿಗನೂರು ವಿ.ಎಸ್.ಎಸ್.ಎನ್. ಅಧ್ಯಕ್ಷ ಖಾಜಾಸಾಬ್, ರಾಜ್, ನೂರ್, ಸಂತೋಷ್ ಉಪಸ್ಥಿತರಿದ್ದರು.

ಸುರೇಶ್‌ಬಾಬು ಮತ ಯಾಚನೆ
ಕಂಪ್ಲಿ:
ಕಂಪ್ಲಿ ವಿಧಾನಸಭಾಕ್ಷೇತ್ರ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಟಿ.ಎಚ್. ಸುರೇಶ್‌ಬಾಬು ಭಾನುವಾರ ಪಟ್ಟಣದ ವಿವಿಧೆಡೆ ಮನೆಗಳಿಗೆ ತೆರಳಿ ಮತ ಯಾಚಿಸಿದರು.

ಕಂಪ್ಲಿ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವು ದರ ಜೊತೆಗೆ ಕಂಪ್ಲಿ ಮತ್ತು ಕುರುಗೋಡು ಪಟ್ಟಣಗಳನ್ನು ನೂತನ ತಾಲ್ಲೂಕು ಕೇಂದ್ರಗಳಾಗಿ ಘೋಷಿಸು ವಲ್ಲಿ ಶ್ರಮಿಸಿರುವೆ ಎಂದು ಅವರು ಹೇಳಿ ಮತ ನೀಡಲು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT