ADVERTISEMENT

ಕೂಡ್ಲಿಗಿ: ಲಾರಿ ಹಾಯ್ದು ಮಲಗಿದ್ದ ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 8:00 IST
Last Updated 2 ನವೆಂಬರ್ 2012, 8:00 IST

ಕೂಡ್ಲಿಗಿ: ಲಾರಿ ಹಾಯ್ದು ರಸ್ತೆಯ ಪಕ್ಕದ್ಲ್ಲಲಿ ಮಲಗ್ದ್ದಿದ ಇಬ್ಬರು ವ್ಯಕ್ತಿಗಳು ಸಾವಿಗೀಡಾದ ಘಟನೆ ತಾಲ್ಲೂಕಿನ ಶಿವಪುರ ಗ್ರಾಮದ ಬಳಿ ಬುಧವಾರ ರಾತ್ರಿ 9-30ಕ್ಕೆ ಸಂಭವಿಸಿದೆ.

ಸಾವಿಗೀಡಾದ ವ್ಯಕ್ತಿಗಳು ಮಂಜುನಾಥ (25), ಹಾಲಸ್ವಾಮಿ (18) ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಪುರದ ಮಂಜುನಾಥ ಹಾಗೂ ಹಾಲಸ್ವಾಮಿ ಬುಧವಾರ ರಾತ್ರಿ ಶಿವಪುರ-ಚಿಕ್ಕಕೆರೆನಹಳ್ಳಿ ರಸ್ತೆಯಲ್ಲಿ ತಮ್ಮ ಮೆಕ್ಕೆಜೋಳವನ್ನು ರಸ್ತೆಯಲ್ಲಿ ಹಾಕಿ ಕಾಯಲು ರಸ್ತೆ ಪಕ್ಕದ್ಲ್ಲಲಿಯೇ ಮಲಗಿದ್ದರು.

ರಾತ್ರಿ 9-30ಕ್ಕೆ ಅಪರಿಚಿತ ಲಾರಿಯೊಂದು ಮಲಗಿದ್ದ ಮಂಜುನಾಥ ಹಾಗೂ ಹಾಲಸ್ವಾಮಿ ಅವರ ಮೇಲೆ ಹಾಯ್ದು ಹೋಗಿದೆ. ಪಕ್ಕದಲ್ಲಿದ್ದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದಾಗ ಇಬ್ಬರೂ ಸ್ಥಳದಲ್ಲಿಯೇ ಸಾವಿಗೀಡಾಗಿರುವುದು ತಿಳಿದುಬಂದಿದೆ.

ಲಾರಿಯ ಸಂಖ್ಯೆ ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಕೂಡ್ಲಿಗಿ ಪಿಎಸ್‌ಐ ಎರಿಸ್ವಾಮಿ ತಿಳಿಸಿದ್ದಾರೆ.
ಪ್ರಕರಣ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತನಿಖೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.