ADVERTISEMENT

ಕೆತ್ತನೆಯ ಸೊಬಗ ನೋಡಾ...

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2011, 8:35 IST
Last Updated 13 ನವೆಂಬರ್ 2011, 8:35 IST
ಕೆತ್ತನೆಯ ಸೊಬಗ ನೋಡಾ...
ಕೆತ್ತನೆಯ ಸೊಬಗ ನೋಡಾ...   

ಇತಿಹಾಸ ಪ್ರಸಿದ್ಧ ಹಂಪಿಯ ಪರಿಸರಕ್ಕೆ ಹೊಂದಿಕೊಂಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ದೇಶದ ವೈವಿಧ್ಯಮಯ ಕಲಾ ವೈಭವವೇ ಅನಾವರಣಗೊಂಡಿದೆ.

ಉತ್ತರದ ಉದಯಪುರ, ದೆಹಲಿ, ಬರೋಡಾ ಹರಿಯಾಣ, ದಕ್ಷಿಣದ ಚೆನ್ನೈ ಕಾಸರಗೊಡು ಅಷ್ಟೇ ಏಕೆ ನಮ್ಮ ರಾಜ್ಯದ ಶಹಾಪುರ, ಗುಲ್ಬರ್ಗ, ಚಿತ್ತಾಪುರ ಮೈಸೂರು, ಬಾದಾಮಿ ಹಾಗೂ ವಿವಿಯ  ಹೆಸರಾಂತ ಕಲಾವಿದರು ತಮ್ಮ ಆಲೋಚನೆಯ ಕಲಾಕೃತಿಗಳನ್ನು ನಿರ್ಮಿಸುವ ಮೂಲಕ ವಿವಿ ಆವರಣದಲ್ಲಿ ಸಮಾನತೆ ಹಾಗೂ ನೈಸರ್ಗಿಕ ಸೊಬಗಿನ ವೈವಿಧ್ಯಮಯ ಕಲಾಕೃತಿಗಳು ಮತ್ತು ಇತ್ತೀಚೆಗೆಷ್ಟೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಡಾ.ಚಂದ್ರಶೇಖರ ಕಂಬಾರರ ನೈಜತೆಯ ಪ್ರತೀಕವಾದ ಕಲಾಕೃತಿಗಳಿಗೆ ಅಂತಿಮ ಸ್ಪರ್ಶನೀಡುತ್ತಿದ್ದು ಕಲಾವೈಭವವೇ ನಿರ್ಮಾಣವಾಗಿದೆ. 

ಹಂಪಿ ಕನ್ನಡ ವಿಶ್ವವಿದ್ಯಾಲಯ ಜ್ಞಾನದ ಆಗರ ವ್ಯಕ್ತಿಯಲ್ಲಿರುವ ಸ್ವಂತಿಕೆ ಜೀವಂತಿಕೆಯನ್ನು ಹೊರಸೂಸುವಂತೆ ಮಾಡಲು ವೇದಿಕೆಯಾಗಿದೆ ಎಂಬುದಕ್ಕೆ ಮಾತು ಬಾರದ ಕಲಾವಿದನಾದ ಶಹಾಪುರದ ರಾಜಕುಮಾರ ಮಾಲಗತ್ತಿ ಶಿಲ್ಪರಚನೆಯಲ್ಲಿ ತನ್ನನು ತಾನು ತೊಡಗಿಸಿ ಕೊಂಡಿರುವುದು ಒಂದೆಡೆ. ಇನ್ನೊಂದೆಡೆ ವಿವಿಯ ಚಿಹ್ನೆಯುಳ್ಳ ಶಿಲ್ಪ ಗಮನ ಸೆಳೆಯುವಂತಿದೆ.

ಕಲಾವಿದ ಒಂದು ಕಲಾಕೃತಿ ರಚಿಸು ವಾಗ ಅನುಸರಿಸಬೇಕಾದ ಕ್ರಮಗಳು, ತನ್ಮಯತೆ ಹಾಗೂ ವಿವಿಧ ಆಯಾಮ ಗನ್ನು ನಮ್ಮ ವಿದ್ಯಾರ್ಥಿಗಳಿಗೆ ಒದಗಿಸ ಬೇಕು ಎಂದು ಕಳೆದೆರಡು ವರ್ಷಗಳಿಂದ ಇಂತಹ ಶಿಬಿರ ಆಯೋಜಿಸಿದೆ ನಿಜಕ್ಕೂ ನಮ್ಮ ವಿದ್ಯಾರ್ಥಿಗಳಿಗೆ ಅವಿಸ್ಮರಣೀಯ ಕ್ಷಣವಾಗಿದೆ ಎನ್ನುತ್ತಾರೆ ವಿದ್ಯಾರಣ್ಯದ ಉಪನ್ಯಾಸಕ ಡಾ.ಶಿವಾನಂದ ಬಂಟನೂರು.

ಕಲಾವಿದರಿಗೆ ತಮ್ಮ ಸೃಜನಶೀಲತೆ ಯನ್ನು ವ್ಯಕ್ತಪಡಿಸಲು ಹಾಗೂ ತಮ್ಮ  ವಿದ್ಯಾರ್ಥಿಗಳಿಗೆ ವೈವಿಧ್ಯತೆಯನ್ನು ಪರಿಚಯಿಸಲು ನಡೆಸಿರುವ ಶಿಬಿರ ಅರ್ಥ ಪೂರ್ಣ, ಇಂತಹ ಸಂದರ್ಭದಲ್ಲಿ ಸಂದೇಶ ಸಾರುವ ಕಲಾಕೃತಿಗಳು ಸಮಾನತೆ ಮತ್ತು ನಿಸರ್ಗಕ್ಕೆ ಪೂರಕ ಆಗಬಲ್ಲವು ಎನ್ನುತ್ತಾರೆ ಡಾ.ಲಕ್ಷ್ಮೀಪತಿ.

“ಪ್ರತಿಯೊಂದು ಸಂದೇಶವೂ ಇತಿಹಾಸವಾಗಬೇಕು ಆಗಲೇ ಕಲೆ ಮತ್ತು ಕಲಾವಿದನೂ ಇತಿಹಾಸವಾಗು ತ್ತಾನೆ” ಇಂತಹ ಪರಿಸರ ಒದಗಿಸಿದ ವಿವಿಯ ಕಾರ್ಯ ಶ್ಲಾಘನೀಯ ಎನ್ನುತ್ತಾರೆ ಚಿತ್ತಾಪುರದ  ನಟರಾಜ ಶಿಲ್ಪಿ.

ಕನ್ನಡ ವಿಶ್ವವಿದ್ಯಾಲಯ ನಾಡಿನ ಕಲಾ ಸಂಪತ್ತು ಹಾಗೂ ವೈಭವವನ್ನು ಅನಾವರಣಗೊಳಿಸಬೇಕು. ಬೇರೆ ಪರಿಸರ ಗಳ ಅಧ್ಯಯನಕ್ಕೂ ಪೂರಕವಾಗಬೇಕು ಎಂಬ ಆಶಯದಿಂದ ಇಲ್ಲಿನ ಪರಿಸರಕ್ಕೆ ಹೊಂದಿಕೆಯಾಗುವ ಹಾಗೂ ಯುವ ಕಲಾವಿದರಿಗೆ ಪ್ರೇರಣೆಯಾಗಲು ಆಯೋಜಿಸಿರುವ ಶಿಲ್ಪಕಲಾ ಶಿಬಿರ ಸಿಂಡಿಕೇಟ್ ನಿರ್ಣಯದಂತೆ ಆಯೋಜಿಸ ಲಾಗಿದೆ ಇದರಿಂದ ನಮ್ಮ ವಿದ್ಯಾರ್ಥಿ ಗಳಿಗೆ ಹೊಸತನವನ್ನು ಒದಗಿಸಿದಂತಾ ಗಿದೆ ಕುಲಪತಿ ಡಾ.ಎ. ಮುರಿಗೆಪ್ಪ ಹರ್ಷ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಹೊಸ ಆಯಾಮ ಪಡೆಯಲು ಶಿಬಿರ ನೆರವಾಗಿದೆ ಎಂದು ಹೇಳುತ್ತಾರೆ ಸಂಚಾಲಕ ಡಾ.ವಿರೇಶ ಬಡಿಗೇರ, ಲಲಿತಕಲಾ ನಿಕಾಯದ ಡಾ.ಎಸ್.ಸಿ. ಪಾಟೀಲ್ ಮತ್ತು ಕುಲ ಸಚಿವ ಡಾ.ಮಂಜುನಾಥ ಬೇವಿನಕಟ್ಟಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.