ADVERTISEMENT

ಖಾಸಗಿ ವಾಹನ ನಿಲ್ದಾಣವಾದ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 9:35 IST
Last Updated 6 ಫೆಬ್ರುವರಿ 2011, 9:35 IST

ಕಂಪ್ಲಿ: ಪಟ್ಟಣದ ಹಳೇ ಬಸ್ ನಿಲ್ದಾಣ ಮತ್ತು ಡಾ. ಅಂಬೇಡ್ಕರ್ ವೃತ್ತದಲ್ಲಿ ವಾಹನ ಸಂಚಾರ ಮತ್ತು ಪಾದಚಾರಿ ಗಳಿಗೆ ಅಡಚಣೆಯಾಗಿದ್ದ ಹಣ್ಣಿನ ವ್ಯಾಪಾರಿಗಳನ್ನು ಸ್ಥಳಾಂತರಿ ಸಲು ಪುರಸಭೆ ಆಡಳಿತ ಮಂಡಳಿ ಇತ್ತೀಚಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಿದೆ.

ಆದರೆ ಈ ನೂತನ ಮಾರುಕಟ್ಟೆ ಯಲ್ಲಿ ಹಣ್ಣಿನ ವ್ಯಾಪಾರಿಗಳಿಲ್ಲದೆ ಅದು ಸದ್ಯ ಖಾಸಗಿ ವಾಹನಗಳ ನಿಲುಗಡೆ ಸ್ಥಳವಾಗಿ ಮಾರ್ಪಾಟ್ಟಿದೆ. ಈ ಪುರುಷಾರ್ಥಕ್ಕೆ ಪುರಸಭೆ ಅಭಿವೃದ್ಧಿ ಅನುದಾನದಲ್ಲಿ ವೆಚ್ಚ ಮಾಡಿದ್ದು ರೂ. 7.50 ಲಕ್ಷ ಎಂದು ಹೇಳಲಾಗುತ್ತಿದೆ.

ಹಣ್ಣಿನ ವ್ಯಾಪಾರಿಗಳು ಮಾರುಕಟ್ಟೆ ನಿರ್ಮಿಸಿದ ನಂತರ ಕಾಟಾಚಾರಕ್ಕೆ ವ್ಯಾಪಾರ ಆರಂಭಿಸಿದರು. ಇಲ್ಲಿ ವ್ಯಾಪಾರವಾಗುತ್ತಿಲ್ಲ ಎಂದು ‘ಮರಳಿ ಗೂಡಿಗೆ’ ಎನ್ನುವಂತೆ ಮೊದಲಿನಂತೆ ಪಾದಾಚಾರಿ ರಸ್ತೆ ಅತಿಕ್ರಮಿಸಿ ಬಂಡಿಗಳನ್ನು ಇಟ್ಟುಕೊಂಡು ವ್ಯಾಪಾರ ಆರಂಭಿಸಿದ್ದಾರೆ. ಇದರಿಂದ ವೃತ್ತದಲ್ಲಿ ಬಸ್, ವಾಹನ, ದ್ವಿಚಕ್ರ ಸವಾರರಿಗೆ ಮತ್ತು ಪಾದಾಚಾರಿಗಳಿಗೆ ತುಂಬಾ ಕಿರಿಕಿರಿಯಾಗಿದೆ.

ಪುರಸಭೆ ನಿರ್ಮಿಸಿದ ಕೆಲವೇ ದಿನಗಳಲ್ಲಿ ಮಾರುಕಟ್ಟೆ ನಿರುಪಯುಕ್ತ ವಾಗಿದ್ದು, ಪುರಸಭೆ ಉದ್ದೇಶ ಈಡೇರದೆ ಲಕ್ಷಾಂತರ ರೂಪಾಯಿ ‘ನೀರಲ್ಲಿ ಹೋಮ’ ಮಾಡಿದಂತಾಗಿದೆ ಎಂದು ಸಾರ್ವಜನಿಕರು ಆಪಾದಿಸು ತ್ತಾರೆ. ಈ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿ ನಿರ್ಧಾರ ತೆಗೆದುಕೊಳ್ಳಬೇಕಾದ ಪುರಪಿತೃಗಳು ಅದ್ಯಾಕೋ ಮೌನಕ್ಕೆ ಶರಣಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.