ADVERTISEMENT

ಗಂಧರ್ವ ಸಂಗೀತಕ್ಕೆ ವೇದಿಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 5:35 IST
Last Updated 21 ಸೆಪ್ಟೆಂಬರ್ 2011, 5:35 IST

ಕುಂದಗೋಳ: ಇಲ್ಲಿನ ಮಣ್ಣಿನ ಗುಣವೋ, ನಾಡ ಗೀರ ವಾಡೆ ಗುಣವೋ, ಸಂಗೀತವೆಂದರೆ ಎಲ್ಲಿಲ್ಲದ ಪ್ರೇಮ. ದೇಶದ ಮೂಲೆ ಮೂಲೆಗಳಿಂದ ಸಂಗೀತ ವನ್ನು ಆಲಿಸಲು ಮತ್ತು ಹಾಡಲು ಬರುತ್ತಾರೆ. ಸವಾಯಿ ಗಂಧರ್ವರನ್ನು ಮೊಟ್ಟಮೊದಲು ಸಂಗೀತ ಹಾಡಲು ಮತ್ತು ಕಲಿಯಲು ಪ್ರೋತ್ಸಾಹಿ ಸಿದ ಮಹಾನ್ ವ್ಯಕ್ತಿ ನಾಡಗೀರ ವಾಡೆ ಧಣಿ ದಿವಂಗತ ರಂಗನಗೌಡ್ರ ಅವರು. ರಂಗನಗೌಡ್ರ ಅವರು ಆಗಿನ ಕಾಲದಲ್ಲಿ ಸಂಗೀತಗಾರರನ್ನು ಪೋಷಿ ಸಲು ಸಂಗೀತ ಕಛೇರಿಯನ್ನೇ ಏರ್ಪಡಿಸುತ್ತಿದ್ದರು. ಅದನ್ನೇ ಮುಂದುವರೆಸಿಕೊಂಡು ಬಂದವರು ದಿವಂಗತ ನಾನಾಸಾಹೇಬ್ ನಾಡಗೀರ. ಈಗ ಆರ್.ಕೆ. ನಾಡಗೀರ ಅವರು ಅದನ್ನು ಮುಂದುವರಿಸಿ ಕೊಂಡು ಬಂದಿದ್ದಾರೆ.

ಕಿರಾಣಾ ಘರಾಣೆಯ ಪರಿಪಾಲಕರಾಗಿದ್ದ ಉಸ್ತಾದ್ ಅಬ್ದುಲ್ ಕರೀಮ್‌ಖಾನ್ ಅವರ ಶಿಷ್ಯ ರಾಗಿದ್ದ ಸವಾಯಿ ಗಂಧರ್ವರು ಅನೇಕ ಶಿಷ್ಯ ಬಳಗ ವನ್ನು ಬೆಳೆಸಿದವರು. ಭಾರತ ರತ್ನ ದಿವಂಗತ ಪಂಡಿತ ಭೀಮಸೇನ ಜೋಶಿ, ಪದ್ಮಭೂಷಣ ವಿದುಷಿ ಗಂಗೂಬಾಯಿ ಹಾನಗಲ್ಲ, ಉಸ್ತಾದ ಫಿರೋಜ್ ದಸ್ತೂರ, ಶ್ರೀಮಂತ ನಾನಾಸಾಹೇಬ್ ನಾಡಗೀರ ಅವರಲ್ಲಿ ಪ್ರಮುಖರು.

ಸವಾಯಿ ಗಂಧರ್ವರು ನಿಧನರಾದದ್ದು 1952ರಲ್ಲಿ ಭಾದ್ರಪದ ಮಾಸ ನವಮಿಯಲ್ಲಿ. ಅಂದಿನಿಂದ ಶ್ರೀಮಂತ ನಾನಾಸಾಹೇಬ್ ನಾಡ ಗೀರರು ಸ್ವಂತ ಖರ್ಚಿನಲ್ಲಿ 25 ವರ್ಷಗಳಿಂದ ಗುರು ಸ್ಮರಣೆ ಸ್ಮೃತಿ ಸಂಗೀತೋತ್ಸವ ನಡೆಸುತ್ತಿದ್ದಾರೆ. ನಾಡಗೇರಿ ವಾಡೆಯಲ್ಲಿ ಆ ಪರಂಪರೆ ಇನ್ನೂ ನಡೆದುಕೊಂಡು ಬಂದಿದ್ದು ಸಂಗೀತಗಾರರಿಗೆ ಮತ್ತು ಆಸಕ್ತರಿಗೆ ಸಂತಸದ ಸಂಗತಿ.

ಈ ವಾಡೆಯಲ್ಲಿ ಪಂ. ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ, ಪಂಚಾಕ್ಷರ ಗಾವಾಯಿ, ದೊರೆಸ್ವಾಮಿ ಅಯ್ಯಂಗಾರ, ಡಾ. ಪ್ರಭಾ ಅತ್ರೆ, ಮಾಲಿನಿ, ರಾಜೂರಕರ್, ಶ್ರೀಕಾಂತ ಬಾಕರೆ, ರಾಜೀವ ತಾರಾನಾಥ, ಪಂಡಿತ್ ಜಸರಾಜ್, ಬಂಡೋಪಂತ ಸೊಲ್ಲಾಪುರಕರ, ಬಾಳಪ್ಪ ಹುಕ್ಕೇರಿ, ಶ್ರೀಕಾಂತ ದೇಶಪಾಂಡೆ, ವಸಂತರಾವ್ ದೇಶಪಾಂಡೆ, ಅರ್ಜುನಸಾ ನಾಕೋಡ, ಹೀರಾಬಾಯಿ ಬಡೋದೆಕರ, ಕೃಷ್ಣಾ ಕೃಷ್ಣಾ ಹಾನಗಲ್, ಮಾಧವ ಗುಡಿ, ಶ್ರೀಪತಿ ಪಾಡಿ ಗಾರ, ವಿನಾಯಕ ತೊರವಿ, ಗಣಪತಿ ಭಟ್ ಹಾಸಣಗಿ, ಆರತಿ ಅಂಕಲೀಕರ, ಜಯತೀರ್ಥ ಮೇವುಂಡಿ, ಡಾ. ಅಶೋಕ ಹುಗ್ಗಣ್ಣವರ ಹೀಗೆ ಹತ್ತು ಹಲವು ಮಹಾನ್ ಸಂಗೀತಗಾರರು ಸೇವೆ ಸಲ್ಲಿಸಿದ್ದಾರೆ.

`ಈ ನಾಡಗೀರ ವಾಡೇದಾಗ ಕೊಳಲು ನುಡಿ ಸೋದು ಅಂದ್ರ ಒಂದು ಥರ ಮೈಯೊಳಗ ರೋಮಾಂಚನ ಆಗ್ತದ~ ಎನ್ನುತ್ತಾರೆ ಖ್ಯಾತ ಕೊಳಲು ವಾದಕ ಪದ್ಮನಾಭ ಬಾಪು.

`ವಾಡೇದಾಗ ಸಂಗೀತ ಕಛೇರಿ ನೀಡೂದಂದ್ರ ಅದನ ಶಬ್ದದೊಳಗ ಹೇಳಲಿಕ್ಕ ಆಗುದ್ಲ್ಲಿಲರ‌್ರಿ. ಅದನ್ನ ಇಲ್ಲಿ ಬಂದೇ ಅನುಭವಿಸಬೇಕ್ರಿ. ಆನಂದಿ ಸಬೇಕ್ರಿ” ಎನ್ನುತ್ತಾರೆ ಕಿರಾಣಾ ಘರಾಣಾ ಪರಂಪ ರೆಯ ಹಾಡುಗಾರ ಪಂಡಿತ ಜಯತೀರ್ಥ ಮೇವುಂಡಿ.

ದ.ರಾ. ಬೇಂದ್ರೆ, ಬೀಚಿ, ಕಾದಂಬರಿಗಾರ ಎಸ್.ಎಲ್. ಭೈರಪ್ಪ, ಪು.ಲ. ದೇಶಪಾಂಡೆ, ನಾನಿ ಕಾಕಾ (ಎನ್ಕೆ) ಹೀಗೆ ಅನೇಕ ಸಾಹಿತ್ಯಗಾರರ ದಂಡೇ ಸಂಗೀತೋತ್ಸವದಲ್ಲಿ ಪಾಲೊಂಡಿದ್ದರು.

ಇದೇ 22ರಂದು ಸಂಜೆ 4ಕ್ಕೆ ಸಚಿವ ಸುರೇಶಕುಮಾರ್ ಸಂಗೀತೋತ್ಸವ ಉದ್ಘಾ ಟಿಸಲಿದ್ದು, ಡಾ. ಗೋ.ಹ. ನರೇಗಲ್ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಪುಣೆಯ ಮಾವುಲಿ ಟಾಕಳಕರ್ ಅವರನ್ನು ಸನ್ಮಾನಿ ಸಲಾಗುತ್ತದೆ. ಪಂಡಿತ್ ಭೀಮಸೇನ ಜೋಶಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ.

ಪಂಡಿತ ಜಯತೀರ್ಥ ಮೇವುಂಡಿ, ಆರತಿ ಹೆಗಡೆ, ಪುಣೆಯ ಅಂಕಿತಾ ಜೋಶಿ, ಯರಗುಪ್ಪಿಯ ಡಾ. ಅಶೋಕ ಹುಗ್ಗಣ್ಣವರ, ಬೆಂಗಳೂರಿನ ಕುಮಾರ ಮರಡೂರ, ಧಾರವಾಡದ ವಿಜಯಕುಮಾರ ಪಾಟೀಲ, ಶಿರಸಿಯ ಆರಾಧನಾ ಹೆಗಡೆ, ಶ್ರುತಿ ಬೋಡೆ, ಮುಂಬೈನ ಕೃಷ್ಣ ಬೋಂಗಾನಿ, ಮಂಗಳೂರಿನ ಬಾಲಚಂದ್ರ ಪ್ರಭು ಗಾಯನ ಪ್ರಸ್ತುತ ಪಡಿಸುವರು.

ಪಂ. ಪ್ರವೀಣ ಗೋಡ್ಖಿಂಡಿ ಹಾಗೂ ಪಂ.ಬಾಪೂ ಪದ್ಮನಾಭ, ಸುಮಾ ಹೆಗಡೆ, ರಫೀಕ್ ಮತ್ತು ಶಫೀಕ್ ಖಾನ್, ಸಂಜೀವ ಕೊರ್ತಿ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.