ADVERTISEMENT

ಗಮನ ಸೆಳೆದ ಜೋಡೆತ್ತುಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 9:15 IST
Last Updated 26 ಏಪ್ರಿಲ್ 2012, 9:15 IST

ಸಂಡೂರು: ಬಸವ ಜಯಂತಿ ಶತ ಮಾನೋತ್ಸವ  ಪ್ರಯುಕ್ತ ಪಟ್ಟಣದ ವೀರ ಶೈವ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ವಿವಾಹ ಮತ್ತು ಜಂಗಮ ವಟುಗಳಿಗೆ ದೀಕ್ಷಾ ನೀಡುವ  ಕಾರ್ಯಕ್ರಮಗಳು ವಿರಕ್ತ ಮಠದ ಪ್ರಭುಸ್ವಾಮಿಗಳು ಹಾಗೂ ಕೊಟ್ಟೂರಿನ ಭೂತ ಭುಜಂಗ ಮಠದ ಯೋಗೀಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಮಂಗಳವಾರ ಜರುಗಿದವು.

ನಂತರ ಬಸವಣ್ಣನವರ ಚಿತ್ರಪಟಕ್ಕೆ ಅಧಿಕಾರಿಗಳು, ಸಮಾಜದ ಮುಖಂಡರು  ಪೂಜೆ ಸಲ್ಲಿಸಿ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪ್ರಹ್ಲಾದ್ ಜೋಯಿಸಾ, ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಈಶ್ವರ್ ಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ಶ್ರೀಧರ್ ಅಂಗಡಿ, ಪುರಸಭೆ ಅಧ್ಯಕ್ಷ ಎಲ್.ಎಚ್. ಶಿವಕುಮಾರ್, ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ಮಾಜಿ ಅಧ್ಯಕ್ಷ ಡಿ.ಕೃಷ್ಣಪ್ಪ, ವೀರಶೈವ ಸಮಾಜದ ಮುಖಂಡರಾದ ಛಿತ್ರಿಕಿ ತಿಪ್ಪಣ್ಣ, ಮೇಲ್ ಸೀಮೆ ಶಂಕ್ರಪ್ಪ ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.