ADVERTISEMENT

ಜಡೇಸಿದ್ಧೇಶ್ವರ ಮಠದಲ್ಲಿ ಲಕ್ಷದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 5:44 IST
Last Updated 6 ಡಿಸೆಂಬರ್ 2012, 5:44 IST

ಕುರುಗೋಡು: ಪುರಾಣ ಶ್ರವಣದಿಂದ ಮಾನಸಿಕ ನೆಮ್ಮದಿ ಹಾಗೂ ನೈತಿಕ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎಂದು ಹಂಪಿ ಸಾವಿರ ದೇವರ ಮಠದ ವಾಮದೇವಶ್ರೀ ತಿಳಿಸಿದರು.

ಇಲ್ಲಿಗೆ ಸಮೀಪದ ಎಮ್ಮಿಗನೂರು ಗ್ರಾಮದ ಜಡೇಸಿದ್ದೆೀಶ್ವರ ಮಠದಲ್ಲಿ ಏರ್ಪಡಿಸಿರುವ ಜಡೇಸಿದ್ದೆೀಶ್ವರ ಪುರಾಣದ ಅಂಗವಾಗಿ ನಡೆದ ಲಕ್ಷ ದೀಪೋತ್ಸವ ಉದ್ಘಾಟಿಸಿ ಮಾತನಾಡಿದರು.

ಪುರಾಣದಲ್ಲಿ ಬರುವ ಪಾತ್ರಗಳು ಮನುಷ್ಯನಲ್ಲಿ ಹೊಸ ಚೇತನ ತುಂಬಿ, ಜೀವನ ಜಂಜಾಟದಲ್ಲಿ ಸಾರ್ಥಕ ಬದುಕಿನ ಮಾರ್ಗ ತಿಳಿಸುತ್ತದೆ. ಇದರಿಂದ ಸಾಮಾಜಿಕ ನೈತಿಕಮಟ್ಟ ಮೇಲೇರುತ್ತದೆ ಎಂದರು. 

ಕಂಪ್ಲಿ ವಿಧಾನ ಸಭಾ ಕ್ಷೇತ್ರ ಶಾಸಕ ಟಿ.ಎಚ್. ಸುರೇಶ್‌ಬಾಬು ಅಧ್ಯಕ್ಷತೆ ವಹಿಸಿದ್ದರು. ಕುರುಗೋಡು ರಾಘವಾಂಕ ಮಠದಶ್ರೀ, ಮಠದ ಉಸ್ತುವಾರಿ ಮಂಡಳಿಯ ಜಡೇ ಸಿದ್ದಯ್ಯ ಸ್ವಾಮಿ, ಕಂಪ್ಲಿ ಯೋಗಯ್ಯ ಸ್ವಾಮಿ, ಕೆ.ಎಂಫ್ ಮಾಜಿ ಅಧ್ಯಕ್ಷ ಯರಂಗಳಿಗಿ ತಿಮ್ಮಾರೆಡ್ಡಿ,ಗ್ರಾಮದ ಮುಖಂಡ ಬಿ. ಮಹೇಶ್ ಗೌಡ, ವೀರಾಪರು ಶಿವಶಂಕರಗೌಡ  ಮತ್ತಿತರರು ಇದ್ದರು.

ಪುರಾಣ ಕೇಳಲು ಸುತ್ತಮುತ್ತಲಿನ ನಾನಾ ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕಾರ್ಯಕ್ರಮದ ನಿಮಿತ್ತ ಮಠದಲ್ಲಿ ಬೆಳಿಗ್ಗೆಯಿಂದ ನಾನಾ ಧಾರ್ಮಿಕ ವಿಧಿವಿಧಾನಗಳು ನಡೆದವು.

ಪಕ್ಕದ ಬಳಾಪುರ ಗ್ರಾಮದಲ್ಲಿ ಸ್ಥಳೀಯ ಕಲಾವಿದರು ವೀರಅಭಿಮನ್ಯು ಕಾಳಗ ಎಂಬ ಬಯಲಾಟ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.